Pandit jawaharlal nehru biography in kannada
ಜವಾಹರಲಾಲ್ ನೆಹರು
ಜವಾಹರಲಾಲ್ ನೆಹರು (14 ನವೆಂಬರ್ 1889 - 27 ಮೇ 1964)((ನವೆಂಬರ್ ೧೪, ೧೮೮೯ - ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ನಾಯಕನಾಗಿ ಹೊರಹೊಮ್ಮಿದರು.,ಭಾರತ ಸ್ವಾತಂತ್ರ್ಯ ಬಂದ ನಂತರ 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಇವರು ಸ್ವಾತಂತ್ರ್ಯ ಹೋರಾಟಗಾರ ಮೋತಿಲಾಲ್ ನೆಹರೂ ಅವರ ಮಗ. ಅವರು ನ್ಯಾಯವಾದಿಯಾಗಿದ್ದರು. ಇವರು ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದವರು. ಇವರಿಗೆ ಚಾಚಾ ನೆಹರು ("ಅಂಕಲ್ ನೆಹರು") ದೇಶದ ಮೊದಲ ಪ್ರಧಾನಿಯಾಗಿ ಮತ್ತು ಸಂವಿಧಾನ ನಿರ್ಮಾತೃಗಳಲ್ಲಿ ಒಬ್ಬರಾಗಿ ದೇಶದ ಪ್ರಜಾಪ್ರಭುತ್ವಕ್ಕೆ ಮತ್ತು ಜಾತ್ಯತೀತ ಮೌಲ್ಯಕ್ಕೆ ಭದ್ರ ಬುನಾದಿ ಹಾಕಿದವರು ಶ್ರೀ ನೆಹರೂ ಅವರು. (ಇಂಗ್ಲಿಷ್ ವಿಭಾಗದ ಅನುವಾದ)[೧][೨]
ಪೀಠಿಕೆ
[ಬದಲಾಯಿಸಿ]ನೆಹರುರವರ ಸಾರ್ವಜನಿಕ ಜೀವನ : ೧೮೮೯-೧೯೧೮
[ಬದಲಾಯಿಸಿ]- ಪಂಡಿತ್ ಜವಾಹರಲಾಲ್ ನೆಹರು ಅವರು ಪ್ರಮುಖ ನ್ಯಾಯವಾದಿ ಮತ್ತು ರಾಷ್ಟ್ರೀಯತಾವಾದಿ ರಾಜನೀತಿಜ್ಞ ಮೋತಿಲಾಲ್ ನೆಹರೂ ಮತ್ತು ಸ್ವರೂಪ್ ರಾಣಿ, ಅವರ ಮಗ. ನೆಹರು ಕೇಂಬ್ರಿಡ್ಜ್‍ನ ಟ್ರಿನಿಟಿ ಕಾಲೇಜ್ ಪದವೀಧರರಾಗಿದ್ದರು. ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ಇಂಗ್ಲೆಂಡಿಲ್ಲಿ ಅವರು ಇನ್ನರ್ ಟೆಂಪಲ್ ನಲ್ಲಿ ತರಬೇತಿ ಪಡೆದು ನ್ಯಾಯವಾದಿಯಾಗಿ/ ಬ್ಯಾರಿಸ್ಟರ್’ಆಗಿ ಭಾರತಕ್ಕೆ ಹಿಂದಿರುಗಿದ ನಂತರ, ಅವರು ಅಲಹಾಬಾದ್ ಹೈಕೋರ್ಟ್ ನಲ್ಲಿ ಸೇರಿಕೊಂಡರು. ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಆಸಕ್ತಿಯನ್ನು ತೋರಿದರು, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು. ಅಂತಿಮವಾಗಿ ಅವರ ಕಾನೂನು ವಿವಾದ ವಕೀಲಿ ಉದ್ಯೋಗವು ಬದಲಾಗಿ ಅವರ ಕಾರ್ಯ ರಾಷ್ರೀಯವಾದದಕಡೆ ತಿರುಗಿತು.
- ಅವರ ಹದಿಹರೆಯದ ವರ್ಷಗಳಿಂದ ಬದ್ಧ ರಾಷ್ಟ್ರೀಯತಾವಾದಿಯಾಗಿದ್ದು, 1910 ರ ಕ್ರಾಂತಿಗಳ ಸಮಯದಲ್ಲಿ ಅವರು ಭಾರತೀಯ ರಾಜಕೀಯದಲ್ಲಿ ಏರುತ್ತಿರುವ ಉನ್ನತ ವ್ಯಕ್ತಿಯಾಗಿದ್ದರು. ಅವರು 1920 ರ ದಶಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಎಡಪಂಥೀಯ ಬಣಗಳ ಪ್ರಮುಖ ನಾಯಕರಾದರು ಮತ್ತು ಅಂತಿಮವಾಗಿ ಕಾಂಗ್ರೆಸ್’ನ ಸಂಪೂರ್ಣ ಮಾರ್ಗದರ್ಶಿಯಾದ ಗಾಂಧಿಯವರ ಅನುಮತಿಯೊಂದಿಗೆ ಇಡೀ ಕಾಂಗ್ರೆಸ್’ನ ನಾಯಕರಾದರು. ಕಾಂಗ್ರೆಸ್ ಅಧ್ಯಕ್ಷರಾಗಿ 1929 ರಲ್ಲಿ, ನೆಹರೂ ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದರು ಮತ್ತು ಕಾಂಗ್ರೆಸ್’ನ ನಿರ್ಣಾಯಕ ಬದಲಾವಣೆಯಿಂದ ಎಡಪಂಥಕ್ಕೆ ತಿರುಗಿಸಿದರು.
1930- 1947
[ಬದಲಾಯಿಸಿ]- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ :೧೯೧೮-೧೯೩೭
- ೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಉನ್ನತಿಗೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸದಲ್ಲಿದ್ದು ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.
- 1930 ರ ದಶಕದಲ್ಲಿ ಭಾರತೀಯ ರಾಜಕೀಯದಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪ್ರಮುಖ ಪತ್ರವಾಗಿತ್ತು. ಕಾಂಗ್ರೆಸ್ ನಾಯಕತ್ವದಲ್ಲಿ, 1937 ರ ಪ್ರಾಂತೀಯ ಚುನಾವಣೆಯನ್ನು ಮುನ್ನಡೆಸಿ ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರವನ್ನು ರಚಿಸಿದಾಗ ಅವರ “ಜಾತ್ಯತೀತ ರಾಷ್ಟ್ರ/-ದೇಶದ” ಅವರ ಕಲ್ಪನೆಯನ್ನು ಜನರು ಬೆಂಬಲಿಸುವಂತೆ ಕಂಡುಬಂತು; ಮತ್ತೊಂದೆಡೆ, ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಹೆಚ್ಚು ಕ್ಷೀನ ಬೆಂಬಲವನ್ನು ಗಳಿಸಿತು. ಆದರೆ 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ನಂತರ ಈ ಸಾಧನೆಗಳು ತೀವ್ರವಾಗಿ ಹಿನ್ನಡೆ ಕಂಡು ರಾಜಿಯಾಗಿದ್ದವು, ಅದು ಬ್ರಿಟಿಷರು ಕಾಂಗ್ರೆಸ್ ಅನ್ನು ಒಂದು ರಾಜಕೀಯ ಸಂಘಟನೆಯಾಗಿ ಪರಿಗಣಿಸಿ ಅದನ್ನು ಪರಿಣಾಮಕಾರಿಯಾಗಿ ಬಗ್ಗುಬಡಿಯಿತು. ನೆಹರು ಅವರಿಗೆ ಸ್ವಾತಂತ್ರ್ಯಕ್ಕಾಗಿ ತಕ್ಷಣದ ಕರೆಕೊಡುವ ಮನಸ್ಸಿರಲಿಲ್ಲ, ಆದರೆ ಗಾಂಧಿಯವರ ಕರೆಗೆ ಬೆಂಲಿಸಿದರು. ಏಕೆಂದರೆ ಅವರು ಎರಡನೇ ವಿಶ್ವ ಸಮರ ಸಮಯದಲ್ಲಿ ಮಿತ್ರಪಕ್ಷದ ಯುದ್ಧದ ಚಟುವಟಿಕೆಯನ್ನು ಬೆಂಬಲಿಸಲು ಬಯಸಿದ್ದರು, ಅವರು ಹೆಚ್ಚು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೀರ್ಘವಾದ ಸೆರೆವಾಸದಿಂದ ಹೊರಬಂದರು. ಅವರ ಹಳೆಯ ಕಾಂಗ್ರೆಸ್ ಸಹೋದ್ಯೋಗಿ ಮತ್ತು ಈಗ ಎದುರಾಳಿ ಮುಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್, ಆಗ ಭಾರತದಲ್ಲಿ ಮುಸ್ಲಿಂ ರಾಜಕೀಯವನ್ನು ಮುಸ್ಲಿಂ ರಾಜಕೀಯ ನೀತಿಯಿಂದ ಆಳಲು ಬಂದಿತು. ಅಧಿಕಾರ ಹಂಚಿಕೆಗಾಗಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಣ ಮಾತುಕತೆಗಳು ವಿಫಲವಾದವು ಮತ್ತು 1947 ರಲ್ಲಿ ಭಾರತದ ಸ್ವಾತಂತ್ರ್ಯ ಗಳಿಕೆಯು ಜೊತೆ ಭಾರತದ ರಕ್ತಸಿಕ್ತ ವಿಭಜನೆಗೆ ಕಾರಣವಾಯಿತು.
- ನೆಹರು ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ನೇಮಕ ಮಾಡಲು ಕಾಂಗ್ರೆಸ್’ನಿಂದ ಚುನಾಯಿತರಾದರು, ಆದರೆ ನಾಯಕತ್ವ ಪ್ರಶ್ನೆಯ ವಿಚಾರದಲ್ಲಿ ನೆಹರು ಅವರನ್ನು ರಾಜಕೀಯ ಉತ್ತರಾಧಿಕಾರಿಯಾಗಿ 1941 ರಲ್ಲಿಯೇ ಅವರ ಸ್ಥಾನಮಾನವನ್ನು ಬಗೆಹರಿಸಲಾಗಿತ್ತು. ಗಾಂಧಿಜಿಯವರು ತಮ್ಮ ನಂತರದ ರಾಜಕೀಯ ಉತ್ತರಾಧಿಕಾರಿಯು ನೆಹರು ಎಂದು 1941 ರಲ್ಲೇ ಒಪ್ಪಿ ಹೇಳಿಕೆ ಕೊಟ್ಟಿದ್ದರು.
ಪ್ರಧಾನಿಯಾಗಿ 1947- 1964
[ಬದಲಾಯಿಸಿ]- ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪
- ಪ್ರಧಾನಿಯಾಗಿ, ಅವರು ಭಾರತದ ಅವರ ದೃಷ್ಟಿಕೋನದ ರಾಷ್ಟ್ರವನ್ನು ಸಾಧಿಸಲು ಹೊರಟರು. 1950 ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು, ನಂತರ ಅವರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದರು. ಮುಖ್ಯವಾಗಿ, ಅವರು ಭಾರತವು ಒಂದು ವಸಾಹತು-ದೇಶದಿಂದ ಗಣರಾಜ್ಯವಾಗುದವರೆಗಿನ ರೂಪಾಂತರಕ್ಕೆ ಸಾಕ್ಷಯೂ ಕಾರಣೀಭೂತರೂ ಆದರು, ಬಹುಸಿದ್ಧಾತಗಳ ಬಹು ರಾಜಕೀಯ ಪಕ್ಷಗಳ (ಮಲ್ಟಿ-ಪಾರ್ಟಿ ಸಿಸ್ಟಮ್) ವ್ಯವಸ್ಥೆಯ ಪೋಷಣೆ ಮಾಡಿದರು.. ವಿದೇಶಿ ನೀತಿಯಲ್ಲಿ, ಅವರು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಮುಖ್ಯ ಸಂಯೊಜಕರಾಗಿ(ಹೆಗ್’ಮನ್) ಆಗಿ ಭಾರತವನ್ನು ಯೋಜಿಸಿ ಅಲಿಪ್ತ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.
- ನೆಹರೂ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯವನ್ನು ನಿಯಂತ್ರಿಸುತ್ತಾ, 1951, 1957, ಮತ್ತು 1962 ರಲ್ಲಿ ಸತತ ಚುನಾವಣೆಯನ್ನು ಗೆದ್ದುಕೊಂಡು ಎಲ್ಲಾ ಪಕ್ಷಗಳನ್ನು ಮೀರಿಸಿದ (ಕ್ಯಾಚ್-ಆಲ್) ಪಕ್ಷವಾಗಿ ಹೊರಹೊಮ್ಮಿತು. ಅವರ ಕೊನೆಯ ವರ್ಷಗಳಲ್ಲಿ ರಾಜಕೀಯ ಸಮಸ್ಯೆಗಳ ನಡುವೆಯೂ. ಮತ್ತು 1962 ರಲ್ಲಿ ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ನಾಯಕತ್ವದ ವೈಫಲ್ಯದಲ್ಲೂ ಅವರು ಭಾರತದ ಜನತೆಗೆ ಜನಪ್ರಿಯರಾಗಿದ್ದರು. ಭಾರತದಲ್ಲಿ ಅವರ ಜನ್ಮದಿನವನ್ನು “ಬಾಲ ದಿವಸ್” (ಮಕ್ಕಳ ದಿನ) ಎಂದು ಆಚರಿಸಲಾಗುತ್ತದೆ.
- ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು 1947 ಆಗಸ್ಟ್ 14 ರ ಮಧ್ಯರಾತ್ರಿ (೧೨.೨೫), ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ಪ್ರಸಿದ್ಧವಾಗಿದೆ. (It is considered to be one of the greatest speeches of the 20th century and to be a landmark oration that captures the essence of the triumphant culmination of the largely non-violent Indian independence struggle against the British Empire in India. (Tryst with Destiny)[೩]
- ಅದರ ಕನ್ನಡ ಅನುವಾದ -ಆರಂಭದ ವಾಕ್ಯಗಳು:
- "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. (ಬಹಳ ವರ್ಷಗಳ ಹಿಂದೆ ನಾವು ಉತ್ತಮ ಭವಿಷ್ಯದ ಗುರಿಸಾಧನೆಗಾಗಿ ವಚನಬದ್ದತೆ ಹೊಂದಿದ್ದೇವೆ) ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇಇದ್ದರೂ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯ ಇಂದು ಒದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನ ಆತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."
- (Long years ago, we made a tryst with destiny, and now the time comes when we shall redeem our pledge, not wholly or in full measure, but very substantially. At the stroke of the midnight hour, when the world sleeps, India will awake to life and freedom. A moment comes, which comes but rarely in history, when we step out from the old to the new, when an age ends, and when the soul of a nation, long suppressed, finds utterance. It is fitting that at this solemn moment we take the pledge of dedication to the service of India and her people and to the still larger cause of humanity.)
ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912)
[ಬದಲಾಯಿಸಿ]ಜನನ ಮತ್ತು ಕುಟುಂಬದ ಹಿನ್ನೆಲೆ
[ಬದಲಾಯಿಸಿ]- ಜವಾಹರಲಾಲ್ ನೆಹರು ಬ್ರಿಟಿಷ್ ಭಾರತದ ಅಲಹಾಬಾದಿನಲ್ಲಿ 14 ನವೆಂಬರ್ 1889 ರಂದು ಜನಿಸಿದರು. ಅವರ ತಂದೆ ಮೋತಿಲಾಲ್ ನೆಹರೂ (1861-1931), ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಸ್ವ-ನಿರ್ಮಿತ ಶ್ರೀಮಂತ ವಕೀಲರು, 1919 ಮತ್ತು 1928 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ತಾಯಿ, ಸ್ವರೂಪ್ರಣಿ ಥುಸು (1868) -1938), ಲಾಹೋರಿನಲ್ಲಿ ನೆಲೆಗೊಂಡಿದ್ದ ಪ್ರಸಿದ್ಧ ಕಾಶ್ಮೀರಿ ಬ್ರಾಹ್ಮಣ ಕುಟುಂಬದಿಂದ ಬಂದವರು, ಮೋತಿಲಾಲ್ ಅವರ ಎರಡನೆಯ ಪತ್ನಿಯಾಗಿದ್ದರು, ಮೊದಲ ಪತ್ನಿ ಮೊದಲ ಮಗುವಿನ ಜನನ ಸಮಯದಲ್ಲಿ ಮರಣ ಹೊಂದಿದ್ದರು. ಜವಾಹರ್’ಲಾಲ್ ಮೂವರು ಮಕ್ಕಳಲ್ಲಿ ಹಿರಿಯರಾಗಿದ್ದರು, ಉಳಿದ ಇಬ್ಬರು ಬಾಲಕಿಯರು.ಹಿರಿಯ ಮಗಳು, ವಿಜಯ ಲಕ್ಷ್ಮಿ ನಂತರ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಮೊದಲ ಮಹಿಳಾ ಅಧ್ಯಕ್ಷರಾದರು. ಕಿರಿಯ ಸಹೋದರಿ ಕೃಷ್ಣ ಹತೀಶಿಂಗ್ ಅವರು ಪ್ರಸಿದ್ಧ ಬರಹಗಾರರಾದರು ಮತ್ತು ಆಕೆಯು ತನ್ನ ಸಹೋದರನ ಮೇಲೆ ಹಲವಾರು ಪುಸ್ತಕಗಳನ್ನು ರಚಿಸಿದರು.[೪][೫][೬]
ಬಾಲ್ಯ
[ಬದಲಾಯಿಸಿ]- ನೆಹರೂ ಅವರ ಬಾಲ್ಯವನ್ನು "ಆಶ್ರಯ ಮತ್ತು ಸ್ವಾಭಾವಿಕವಾದುದು" ಎಂದು ಬಣ್ಣಿಸಿದ್ದಾರೆ. ಶ್ರೀಮಂತ ಮನೆಗಳಲ್ಲಿ ಆನಂದ್ ಭವನ ಎಂಬ ಹೆಸರಿನ ಅರಮನೆಯ ಎಸ್ಟೇಟ್ ಸೇರಿದಂತೆ ಅವರು ಸವಲತ್ತುಗಳ ವಾತಾವರಣದಲ್ಲಿ ಬೆಳೆದರು. ಅವರ ತಂದೆ ಅವರು ಖಾಸಗಿ ಗವರ್ನೆಸ್ ಮತ್ತು ಬೋಧಕರಿಂದ ಮನೆಯಲ್ಲಿ ಶಿಕ್ಷಣ ಕೊಡಿಸಿದ್ದರು. ಅವರಲ್ಲಿ ಒಬ್ಬ ಬೋಧಕ ಫರ್ಡಿನ್ಯಾಂಡ್ ಟಿ. ಬ್ರೂಕ್ಸ್ ನ ಪ್ರಭಾವದ ಅಡಿಯಲ್ಲಿ, ಅವರು ವಿಜ್ಞಾನ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ತರುವಾಯ ಅವರು ಥಿಯಾಸಾಫಿಕಲ್ ಸೊಸೈಟಿಯಲ್ಲಿ ಹದಿಮೂರನೇ ವಯಸ್ಸಿನಲ್ಲಿ ಕುಟುಂಬ ಸ್ನೇಹಿತೆ ಅನ್ನಿ ಬೆಸೆಂಟ್ ಅವರಿಂದ ಬೋಧಿಸಲ್ಪಟ್ಟರು. ಆದಾಗ್ಯೂ, ಥಿಯಾಸಾಫಿಕಲ್ ಸೊಸೈಟಿಯ ತತ್ವಶಾಸ್ತ್ರದ ಬಗೆಗಿನ ಅವರ ಆಸಕ್ತಿಯು ಶಾಶ್ವತವಾಗಿ ಉಳಿಯಲಿಲ್ಲ. ಬ್ರೂಕ್ಸ್ ತನ್ನ ಬೋಧಕನಾಗಿ ಹೊರಟು ಸ್ವಲ್ಪ ಸಮಯದ ನಂತರ ನೆಹರು ಥಿಯಾಸಾಫಿಕಲ್ ಸಮಾಜವನ್ನು ತೊರೆದನು. ಅವರು ಹೀಗೆ ಬರೆದಿದ್ದ್ದಾರೆ: "ಸುಮಾರು ಮೂರು ವರ್ಷಗಳ ಕಾಲ [ಬ್ರೂಕ್ಸ್] ನನ್ನೊಂದಿಗೆ ಇದ್ದರು ಮತ್ತು ಅನೇಕ ವಿಧಗಳಲ್ಲಿ ಅವರು ನನ್ನ ಮೆಲೆಹೆಚ್ಚು ಪ್ರಭಾವ ಬೀರಿದರು".[೭]
- ನೆಹರೂ ಅವರ ತತ್ವಶಾಸ್ತ್ರದ ಈ ಆಸಕ್ತಿಗಳು ಅವರನ್ನು ಬೌದ್ಧ ಮತ್ತು ಹಿಂದೂ ಧರ್ಮಗ್ರಂಥಗಳ ಅಧ್ಯಯನಕ್ಕೆ ಪ್ರೇರೇಪಿಸಿದವು. ಬಾಲ ರಾಮ್ ನಂದರ ಪ್ರಕಾರ, ಈ ಗ್ರಂಥಗಳು ನೆಹರೂರವರಿಗೆ "ಭಾರತದ [ಭಾರತದ] ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೊದಲ ಪರಿಚಯ ಮಾಡಿಕೊಡುವುವಾಗಿತ್ತು. [ಅವರು] ನೆಹರೂ ಅವರ [ತನ್ನ] ಬೌದ್ಧಿಕ ಶೋಧನೆಗೆ ಪ್ರಾರಂಭಿಕ ಉದ್ವೇಗವನ್ನು ಒದಗಿಸಿತು. ಇದು ನಂತರ ಅವರು ಬರೆದ ‘ದಿ ಡಿಸ್ಕವರಿ ಆಫ್ ಇಂಡಿಯಾ" ದಲ್ಲಿ ಪರಿಪಾಕವಾಗಿ ಹೊಮ್ಮಿತು.[೮]
ಯೌವನ
[ಬದಲಾಯಿಸಿ]- ನೆಹರೂ ತನ್ನ ಯೌವನದಲ್ಲಿ ತೀವ್ರವಾದ ರಾಷ್ಟ್ರೀಯತಾವಾದಿಯಾಗಿದ್ದರು. ಎರಡನೇ ಬೋಯರ್ ಯುದ್ಧ ಮತ್ತು ರುಸ್ಸೋ-ಜಪಾನೀಸ್ ಯುದ್ಧವು ಅವರ ಭಾವನೆಗಳನ್ನು ತೀವ್ರಗೊಳಿಸಿತು. ಎರಡನೆಯದರ ಬಗ್ಗೆ ಅವರು ಹೀಗೆ ಬರೆದಿದ್ದಾರೆ, "ಜಪಾನೀಯರ ಗೆಲುವುಗಳು ನನ್ನ ಉತ್ಸಾಹಕ್ಕೆ ಸಂಚಲನೆ ನೀಡಿದೆ ... ರಾಷ್ಟ್ರೀಯತಾವಾದಿ ವಿಚಾರಗಳು ನನ್ನ ಮನಸ್ಸನ್ನು ತುಂಬಿವೆ ... ನಾನು ಭಾರತೀಯ ಸ್ವಾತಂತ್ರ್ಯ ಮತ್ತು ಯುರೋಪಿನ ಅಧೀನತೆಯಿಂದ ಏಷ್ಯಾ ಸ್ವಾತಂತ್ರ್ಯದ ಬಗ್ಗೆ ಯೋಚಿಸಿದೆ". ಅವರು 1905 ರಲ್ಲಿ ಇಂಗ್ಲೆಂಡಿನ ಪ್ರಮುಖ ಶಾಲೆಯಾದ ಹ್ಯಾರೋನಲ್ಲಿ ತಮ್ಮ ಸಾಂಸ್ಥಿಕ ಶಿಕ್ಷಣವನ್ನು ಪ್ರಾರಂಭಿಸಿದರು, ಅವರು ಜಿಎಂ ಟ್ರೆವೆಲಿಯನ್’ನ ಗರಿಬಾಲ್ಡಿ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು, ಅವರು ಶೈಕ್ಷಣಿಕ ಅರ್ಹತೆಗಾಗಿ ಬಹುಮಾನ ಪಡೆದಿದ್ದರು. ಅವರು ಗರಿಬಾಲ್ಡಿಯನ್ನು ಕ್ರಾಂತಿಕಾರಕ ನಾಯಕ ಎಂಬ ದೃಷ್ಠಿಯಿಂದ ನೋಡಿದರು. ಅವರು ಹೀಗೆ ಬರೆದಿದ್ದಾರೆ: "[ಭಾರತ]ದ ಸ್ವಾತಂತ್ರ್ಯಕ್ಕಾಗಿ ನನ್ನ ಧೈರ್ಯದ ಹೋರಾಟ ಮತ್ತು ನನ್ನ ಮನದಲ್ಲಿ ಭಾರತದ ಮತ್ತು ಇಟಲಿಯ ವಿಚಿತ್ರವಾದ ಮಿಶ್ರಣವನ್ನು ಪಡೆಯಿತು" ಎಂದು. (ಭಾರತದಲ್ಲಿ ಇದೇ ರೀತಿಯ ಕಾರ್ಯಗಳ ಕನಸುಗಳು ಬಂದವು). [೭]
ಪದವಿ
[ಬದಲಾಯಿಸಿ]- ಅಕ್ಟೋಬರ್ 1907 ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜ್’ಗೆ ನೆಹರು ಸೇರಿದರು ಮತ್ತು 1910 ರಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಗೌರವ (ಆನರ್ಸ್) ಪದವಿ ಪಡೆದರು. ಈ ಅವಧಿಯಲ್ಲಿ ಅವರು ರಾಜಕಾರಣ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯವನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿದರು. ಬರ್ನಾರ್ಡ್ ಷಾ, ಎಚ್.ಜಿ.ವೆಲ್ಸ್, ಜೆ.ಎಂ. ಕೀನ್ಸ್, ಬರ್ಟ್ರಾಂಡ್ ರಸ್ಸೆಲ್, ಲೋವೆಸ್ ಡಿಕಿನ್ಸನ್ ಮತ್ತು ಮೆರೆಡಿತ್ ಟೌನ್ಸೆಂಡ್ ಅವರ ಬರಹಗಳು ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಯಿಂದಾಗಿ ರೂಪಿಸಲ್ಪಟ್ಟವು.
- 1910 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ನೆಹರು ಲಂಡನ್ನಿಗೆ ತೆರಳಿ ಇನ್ನರ್ ಟೆಂಪಲ್–ಇನ್’ನಲ್ಲಿ ಕಾನೂನು ಅಧ್ಯಯನ ಮಾಡಿದರು [15] ಈ ಸಮಯದಲ್ಲಿ, ಅವರು ಬೀಟ್ರಿಸ್ ವೆಬ್ ಸೇರಿದಂತೆ ಫ್ಯಾಬಿಯನ್ ಸೊಸೈಟಿಯ ವಿದ್ವಾಂಸರ ಅಧ್ಯಯನವನ್ನು ಮುಂದುವರೆಸಿದರು. ಅವರನ್ನು 1912 ರಲ್ಲಿ ಬಾರ್’ಗೆ (ನ್ಯಾಯವಾದಿಯಾಗಿ) ಕರೆದರು.[೭]
ಅಡ್ವೊಕೇಟ್ ಪದವಿ ಅಭ್ಯಾಸ
[ಬದಲಾಯಿಸಿ]- ಆಗಸ್ಟ್ 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ, ನೆಹರು ಅಲಹಾಬಾದ್ ಹೈಕೋರ್ಟಇನಲ್ಲಿ ವಕೀಲರಾಗಿ ಸೇರಿಕೊಂಡರು ಮತ್ತು ನ್ಯಾಯವಾದಿಯಾಗಿ ನೆಲೆಸಲು ಪ್ರಯತ್ನಿಸಿದರು. ಆದರೆ, ಅವರ ತಂದೆಗಿಂತ ಭಿನ್ನವಾಗಿ, ಅವರ ವೃತ್ತಿಜೀವನದಲ್ಲಿ ಅವರು ಶ್ರದ್ಧೆಯುಳ್ಳ ಆಸಕ್ತಿಯನ್ನು ಹೊಂದಿರಲಿಲ್ಲ ಮತ್ತು ಕಾನೂನಿನ ಅಭ್ಯಾಸ ಅಥವಾ ವಕೀಲರ ಕಂಪನಿಯನ್ನು ಆನಂದಿಸಲಿಲ್ಲ. ಅವರು ಹೀಗೆ ಬರೆದಿದ್ದಾರೆ: "ವಾತಾವರಣವು ಬೌದ್ಧಿಕವಾಗಿ ಉತ್ತೇಜಿಸುವಂತಿಲ್ಲ ಮತ್ತು ಜೀವನದ ಸಂಪೂರ್ಣ ಜಡತೆಯ ರ್ಥಹೀನ ಒಂದು ಭಾವ ನನ್ನ ಮೇಲೆ ಆವರಿಸಿತು." ರಾಷ್ಟ್ರೀಯತೆಯ ರಾಜಕೀಯದಲ್ಲಿ ಅವರ ಒಳಗೊಳ್ಳುವಿಕೆಯು ಅವರ ನ್ಯಾಯವಾದಿ ಉದ್ಯೋಗವನ್ನು ಮುಂಬರುವ ವರ್ಷಗಳಲ್ಲಿ ಕ್ರಮೇಣ ಬದಲಾಯಿಸಿತು. [೯][೧೦]
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)
[ಬದಲಾಯಿಸಿ]ಬ್ರಿಟನ್ನಿನಲ್ಲಿ
[ಬದಲಾಯಿಸಿ]- ನೆಹರೂ ಅವರು ಬ್ರಿಟನ್ನಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ವಕೀಲರಾಗಿದ್ದಾಗ ಭಾರತೀಯ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದರು. [೧೧]
ಭಾರತಕ್ಕೆ ಮರಳಿದ ನಂತರ ಆರಂಭಿಕ ಕೊಡುಗೆ
[ಬದಲಾಯಿಸಿ]- 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ಕೆಲವೇ ತಿಂಗಳುಗಳಲ್ಲಿ, ಪಾಟ್ನಾದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನಕ್ಕೆ ನೆಹರೂ ಹಾಜರಾಗಿದ್ದರು. ಕಾಂಗ್ರೆಸ್ 1912 ರಲ್ಲಿ ಮಧ್ಯಮವರ್ಗ ಮತ್ತು ಗಣ್ಯರ ಪಕ್ಷವಾಗಿತ್ತು ಅವರು "ಇಂಗ್ಲಿಷ್-ತಿಳಿವಳಿಕೆಯ ಉನ್ನತ-ವರ್ಗದ ವ್ಯವಹಾರ" ವನ್ನು ಅಲ್ಲಿನೋಡಿದ್ದರಿಂದ ಅವರಿಗೆ ಮುಜುಗರದ ಗೊಂದಲ ವಿಚಾರವುಂಟಾಯಿತು. ಕಾಂಗ್ರೆsಸ್ಸು ಪರಿಣಾಮಕಾರಿ ಆಗುವುದರ ಬಗ್ಗೆ ನೆಹರೂ ಅನುಮಾನಗಳನ್ನು ಹೊಂದಿದ್ದರು ಆದರೆ ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧಿಯವರು ನೇತೃತ್ವದ ಭಾರತೀಯ ನಾಗರಿಕ ಹಕ್ಕುಗಳ ಚಳವಳಿಯನ್ನು ಬೆಂಬಲಿಸಲು ಪಕ್ಷಕ್ಕೆ ಕೆಲಸ ಮಾಡಲು ಒಪ್ಪಿಕೊಂಡರು,. 1913 ರಲ್ಲಿ ಚಳುವಳಿಗೆ ಹಣವನ್ನು ಸಂಗ್ರಹಿಸಿದರು.ನಂತರ, ಅವರು ಬ್ರಿಟಿಷ್ ವಸಾಹತುಗಳಲ್ಲಿ ಭಾರತೀಯರು ಎದುರಿಸಿದ ಒಪ್ಪಂದಕ್ಕೆ ಒಳಗಾದ ಕಾರ್ಮಿಕರ ಮತ್ತು ಅಂತಹ ಇತರ ತಾರತಮ್ಯಗಳ ವಿರುದ್ಧ ಪ್ರಚಾರ ಮಾಡಿದರು.[೧೨][೧೩][೧೪][೧೫]
ವಿಶ್ವ ಸಮರ I
[ಬದಲಾಯಿಸಿ]- ವಿಶ್ವ ಸಮರ- 1 ಆರಂಭವಾದಾಗ, ಭಾರತದಲ್ಲಿ ಸಹಾನುಭೂತಿಯು ಪರ – ವಿರೋಧವಾಗಿ ವಿಭಜಿಸಲ್ಪಟ್ಟಿತು. ಬ್ರಿಟಿಷ್ ಆಡಳಿತಗಾರರು ಶತ್ರುವಿನ ಎದುರು ಅಸಾಹಯಕರಾಗಿದ್ದನ್ನು ನೋಡಿದ ವಿದ್ಯಾವಂತ ಭಾರತೀಯರು "ಹೆಚ್ಚಿನ ಮತ್ತು ಅತೀವವಾದ ವಿನೋದದ ಸಂತಸವನ್ನು ಪಡೆದರು", ಆಡಳಿತದ ಮೇಲ್ವರ್ಗದವರು ಮಿತ್ರರಾಷ್ಟ್ರಗಳೊಂದಿಗೆ ಸಹಾನುಭೂತಿಯಿಂದ ಅವರ ಪರವಾಗಿದ್ದರು. ನೆಹರು ಅವರು ಯುದ್ಧವನ್ನು ಮಿಶ್ರಿತ ಭಾವನೆಗಳೊಂದಿಗೆ ನೋಡಿದ್ದಾಗಿ ನೆಹರೂ ಒಪ್ಪಿಕೊಂಡಿದ್ದಾರೆ. "ನೆಹರೂ ಅವರ ಸಹಾನುಭೂತಿಯು ಯಾವುದೇ ದೇಶದಪರವಾಗಿದ್ದರೆ ಅದು ಫ್ರಾನ್ಸ್’ನೊಂದಿಗೆ ಮಾತ್ರಾ, ಏಕೆಂದರ ಅದು ಅವರ ಸಂಸ್ಕೃತಿಯು ಮೆಚ್ಚುಗೆಯ ಬಹಳಷ್ಟು ಅಂಸಗಳನ್ನು ಪಡೆದಿದೆ" ಎಂದು ಲೇಖಕ ಪ್ರಾಂಕ ಮೊರೆಸ್ ಹೇಳಿದ್ದಾರೆ. ಯುದ್ಧದ ಸಮಯದಲ್ಲಿ, ನೆಹರು ಸೇಂಟ್ ಜಾನ್ ಆಂಬುಲೆನ್ಸ್ಗೆ ಸ್ವಯಂ ಸೇವಕರಾಗಿಸೇರ್ಪಡೆಗೊಂಡರು ಮತ್ತು ಪ್ರಾಂತೀಯ ಕಾರ್ಯದರ್ಶಿಯಾಗಿ ಅಲಹಾಬಾದಿನಲ್ಲಿ ಸಂಘಟನೆ ಮಾಡಿದರು. ಅವರು ಭಾರತದಲ್ಲಿ ಬ್ರಿಟಿಷ್ ಸರಕಾರವು ಜಾರಿಗೊಳಿಸಿದ ಸೆನ್ಸಾರ್ಶಿಪ್ ನಿಯಮಗಳ ವಿರುದ್ಧ ಮಾತನಾಡಿದರು. [೧೬]
- ಯುದ್ಧದ ವರ್ಷಗಳಲ್ಲಿ ನೆಹರೂ ಅವರ ರಾಜಕೀಯ ದೃಷ್ಟಿಕೋನವು “ತೀವ್ರಗಾಮಿ ಎಂದು ಪರಿಗಣಿಸಲ್ಪಟ್ಟ ನಾಯಕನಾಗಿ” ಹೊರಹೊಮ್ಮಿತು. ರಾಜಕೀಯ ಉಪನ್ಯಾಸದಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ಪ್ರಾಮುಖ್ಯತೆ ಪಡೆದಿದ್ದರೂ ನೆಹರೂ ಅವರ ರಾಜಕೀಯ ದೃಷ್ಟಿಕೋನವು ವಿಚಾರ ಧಾರೆಯು ಗಮನಿಸಲ್ಪಟ್ಟಿತು., ಈ ಮಧ್ಯದಲ್ಲಿ ಪ್ರಾಬಲ್ಯ ಹೊಂದಿದ್ದ, ಗೋಪಾಲ್ ಕೃಷ್ಣ ಗೋಖಲೆಯವರು, ತೀವ್ರಗಾಮಿಗಳನ್ನು ಕುರಿತು "ಸ್ವಾತಂತ್ರ್ಯವನ್ನು ಯೋಚಿಸುವುದು ಹುಚ್ಚುತನ" ಎಂದು ಹೇಳಿದರು, ನೆಹರು ಮಾತನಾಡುತ್ತಾ "ಸಹಕಾರ ರಹಿತ ರಾಜಕೀಯದ ಬಗೆಗೆ ಮತ್ತು ಸರ್ಕಾರದ ಅಡಿಯಲ್ಲಿರುವ ಗೌರವಾನ್ವಿತ ಸ್ಥಾನಗಳಿಗೆ ರಾಜೀನಾಮೆ ನೀಡುವ ಅಗತ್ಯವನ್ನೂ ಮತ್ತು ಕೇವಲ ಜನರ ಪ್ರಾತಿನಿಧ್ಯದ ನಿರರ್ಥಕ ರಾಜಕೀಯವನ್ನು ಮುಂದುವರೆಸದಿರುವುದರ ವಿರುದ್ಧ ಮಾತನಡಿದರು ". ಅವರು ಬ್ರಿಟಿಷ್ ನೀತಿಗಳ ಬೆಂಬಲಕ್ಕಾಗಿ ಭಾರತೀಯ ನಾಗರಿಕ ಸೇವೆಯನ್ನು ಮುಂದುವರಿಸುವುದನ್ನು ಅಪಹಾಸ್ಯ ಮಾಡಿದರು. ಭಾರತೀಯ ನಾಗರಿಕ ಸೇವೆಯನ್ನು ಯಾರೊ ಒಬ್ಬರು ಒಮ್ಮೆ ವಿವರಿಸಿದ್ದಾರೆ- "ಅವರು ಈ ದೇಶದಲ್ಲಿ ದುರದೃಷ್ಟವಶಾತ್ ನಾವು , ಭಾರತೀಯರು ಅಲ್ಲದೆ, ನಾಗರಿಕರೂ ಅಲ್ಲದೆ ಅಥವಾ ನಿಜ ಸೇವೆ ಅಲ್ಲದೆ ಪೀಡಿತರಾಗಿದ್ದೇವೆ", ಎಂದು ಅವರು ಹೇಳಿದರು. ಮೋತಿಲಾಲ್ ನೆಹರು, ಒಬ್ಬ ಪ್ರಮುಖ ಮಧ್ಯಮಮಾರ್ಗ ಅನುಸರಿಸುವ ನಾಯಕರು, ಅವರು ಸಂವಿಧಾನಾತ್ಮಕ ಆಂದೋಲನದ ಇತಿ ಮಿತಿಗಳನ್ನು ಒಪ್ಪಿಕೊಂಡರು, ಆದರೆ ಇದಕ್ಕೆ ಯಾವುದೇ "ಪ್ರಾಯೋಗಿಕ ಪರ್ಯಾಯ" ಇಲ್ಲ ಎಂದು ತನ್ನ ಮಗನಿಗೆ ಸಲಹೆ ನೀಡಿದರು. ಆದಾಗ್ಯೂ, ರಾಷ್ಟ್ರೀಯ ಚಳುವಳಿಯ ವೇಗದಲ್ಲಿ ನೆಹರು ತೃಪ್ತಿ ಹೊಂದಲಿಲ್ಲ. ಅವರು ಭಾರತೀಯರಿಗೆ ಹೋಮ್ ರೂಲ್ ಬೇಡಿಕೆಯಿರುವ ಆಕ್ರಮಣಕಾರಿ ರಾಷ್ಟ್ರೀಯತಾವಾದಿ ಮುಖಂಡರ ಜೊತೆ ತೊಡಗಿಸಿಕೊಂಡರು.[೧೭][೧೮][೧೯]
- 1915 ರಲ್ಲಿ ಗೋಖಲೆ ಮೃತಪಟ್ಟ ನಂತರ ಕಾಂಗ್ರೆಸ್ ರಾಜಕೀಯದ ಮಧ್ಯಮ-ಮಾರ್ಗದವರ ಪ್ರಭಾವವು ಕ್ಷೀಣಿಸಲು ಆರಂಭಿಸಿತು. ಅನ್ನಿ ಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕ್ ಮುಂತಾದ ಮಧ್ಯಮಮಾರ್ಗದ ಮುಖಂಡರು ಹೋಮ್ ರೂಲ್ ಗಾಗಿ (ಸ್ವಯಂ ಆಡಳಿತ) ರಾಷ್ಟ್ರೀಯ ಚಳವಳಿಗೆ ಕರೆ ಮಾಡಲು ಈ ಅವಕಾಶವನ್ನು ಉಪಯೋಗಿಸಿದರು. ಆದರೆ, 1915 ರಲ್ಲಿ, ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು ಏಕೆಂದರೆ ಮಧ್ಯಮ ಮಾರ್ಗದವರು ಇಂತಹ ಆಮೂಲಾಗ್ರ ಬದಲಾವಣೆಯ ಕ್ರಮಕ್ಕೆ ಉತ್ಸಾಹ ತೊರಲಿಲ್ಲ.. ಆದಾಗ್ಯೂ, ಬೆಸೆಂಟ್ 1916 ರಲ್ಲಿ ಹೋಮ್ ರೂಲ್ ಅನ್ನು ಸಮರ್ಥಿಸಲು ಲೀಗ್ ಅನ್ನು ರಚಿಸಿದರು; ಮತ್ತು ತಿಲಕ್ ಅವರು ಜೈಲಿನಿಂದ ಹೊರಬಂದಾಗ, ಏಪ್ರಿಲ್ 1916 ರಲ್ಲಿ ತಮ್ಮ ಸ್ವಂತ ಲೀಗ್ ಅನ್ನು ರಚಿಸಿದರು. ನೆಹರೂ ಎರಡೂ ಲೀಗ್’ ಗಳಲ್ಲಿ ಸೇರಿಕೊಂಡರು. ಆದರೆ ವಿಶೇಷವಾಗಿ ಮೊದಲು ಆರಂಭವಾದ ಬೆಸೆಂಟರ ಪರವಾಗಿ ಕೆಲಸ ಮಾಡಿದರು. ನೆಹರು ಬೆಸೆಂಟ್ ಬಗ್ಗೆ - " ಅವರು [ಬೆಸೆಂಟ್] ನನ್ನ ಬಾಲ್ಯದಲ್ಲಿ ನನ್ನ ಮೇಲೆ ತುಂಬಾ ಶಕ್ತಿಯುತವಾದ ಪ್ರಭಾವವನ್ನು ಹೊಂದಿದ್ದರು . ನಂತರ ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸಿದಾಗ ಅವರ ಪ್ರಭಾವ ಮುಂದುವರೆದಿದೆ" ಎಂದು ಅವರು ನಂತರ ವಿವರಿಸಿದರು. ಭಾರತೀಯ ರಾಜಕೀಯದಲ್ಲಿ ತೀವ್ರಗಾಮಿ ಬದಲಾವಣೆಯನ್ನು ತಂದ ಮತ್ತೊಂದು ಬೆಳವಣಿಗೆಯು, ಡಿಸೆಂಬರ್ 1916 ರಲ್ಲಿ ಕಾಂಗ್ರೆಸ್’ನ ವಾರ್ಷಿಕ ಸಭೆಯಲ್ಲಿ ಲಖನೌ ಒಪ್ಪಂದದೊಂದಿಗೆ ಹಿಂದೂ-ಮುಸ್ಲಿಂ ಏಕತೆಗೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಲಹಾಬಾದಿನಲ್ಲಿ ಈ ಒಪ್ಪಂದವನ್ನು ಸೂಚಿಸಲಾಯಿತು. ಇದು ಆನಂದ್ ಭವನದಲ್ಲಿ ನೆಹರು ನಿವಾಸದಲ್ಲಿ ನಡೆಯಿತು. ಇಬ್ಬರು ಭಾರತೀಯ ಸಮುದಾಯಗಳ ನಡುವಿನ ಹೊಂದಾಣಿಕೆಯನ್ನು ನೆಹರೂ ಸ್ವಾಗತಿಸಿದರು ಮತ್ತು ಪ್ರೋತ್ಸಾಹಿಸಿದರು.[೨೦][೧೭]
ಹೋಂರೂಲ್ ಚಳುವಳಿ
[ಬದಲಾಯಿಸಿ]ಹೋಂರೂಲ್ ಚಳುವಳಿ (ಸ್ವಯಮಾಡಳಿತ ಚಳುವಳಿ)
[ಬದಲಾಯಿಸಿ]- ಹಲವಾರು ರಾಷ್ಟ್ರೀಯತಾವಾದಿ ಮುಖಂಡರು 1916 ರಲ್ಲಿ ಅನ್ನಿ ಬೆಸೆಂಟ್ ನಾಯಕತ್ವದಡಿಯಲ್ಲಿ ಸ್ವಯಂ-ಆಡಳಿತಕ್ಕಾಗಿ ಬೇಡಿಕೆಯನ್ನು ಇಟ್ಟರು. ಅದು ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ನ್ಯೂಫೌಂಡ್ಲ್ಯಾಂಡ್’ಗಳಂತೆ ಬ್ರಿಟಿಷ್ ಸಾಮ್ರಾಜ್ಯದೊಳಗೆ ಒಂದು ಪರಮಾಧಿಕಾರದ ಸ್ಥಿತಿಯನ್ನು ಪಡೆದುಕೊಳ್ಳಲು ಒಟ್ಟಿಗೆ ಸೇರಿದರು. ನೆಹರು ಈ ಚಳವಳಿಯಲ್ಲಿ ಸೇರಿಕೊಂಡರು ಮತ್ತು ಅದರಲ್ಲಿ ಬೆಸೆಂಟ್ ಅವರ ಹೋಮ್ ರೂಲ್ ಲೀಗ್‍ಗೆ ಕಾರ್ಯದರ್ಶಿಯಾಗುವ ಮಟ್ಟಕ್ಕೆ ಏರಿದರು. ಜೂನ್ 1917 ರಲ್ಲಿ ಬೆಸೆಂಟ್ ಅವರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಗೃಹಬಂಧನದಲ್ಲಿ ಇರಿಸಿತು. ಕಾಂಗ್ರೆಸ್ ಮತ್ತು ಇತರ ಭಾರತೀಯ ಸಂಘಟನೆಗಳು ಅವರನ್ನು (ಬೆಸೆಂಟ್) ಬಂಧಮುಕ್ತ ಮಾಡದಿದ್ದಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸಲು ಬೆದರಿಕೆ ಹಾಕಿದರು. ತರುವಾಯ ತೀವ್ರವಾದ ಪ್ರತಿಭಟನೆ ಮತ್ತು ಒತ್ತಾಯದ ಕಾರಣ ಬ್ರಿಟಿಷ್ ಸರ್ಕಾರವು ಬೆಸೆಂಟ್’ ರನ್ನು ಬಿಡುಗಡೆ ಮಾಡಿತು ಮತ್ತು ಅದು ಸ್ವಲ್ಪ ಸಮಯದ ನಂತರ ಅವರಿಗೆ ಗಣನೀಯ ರಿಯಾಯಿತಿಗಳನ್ನು ನೀಡಬೇಕಾಯಿತು.[೨೧]
ಅಸಹಕಾರ ಚಳುವಳಿ
[ಬದಲಾಯಿಸಿ]- 1920 ರಲ್ಲಿ ಅಸಹಕಾರ ಚಳವಳಿಯ ಆರಂಭದಲ್ಲಿ ನೆಹರು ಅವರು ಮೊದಲ ಬಾರಿಗೆ ರಾಷ್ಟ್ರೀಯ ರಾಜಕೀಯ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಗೊಂಡರು. ಯುನೈಟೆಡ್ ಪ್ರಾಂತ್ಯಗಳಲ್ಲಿ (ಈಗ ಉತ್ತರ ಪ್ರದೇಶ) ಚಳವಳಿಯನ್ನು ಅವರು ಮುನ್ನಡೆಸಿದರು. 1921 ರಲ್ಲಿ ನೆಹರು ಅವರನ್ನು ಸರ್ಕಾರಿ-ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಕೆಲವು ತಿಂಗಳುಗಳ ನಂತರ ಬಿಡುಗಡೆ ಮಾಡಲಾಯಿತು. ಚೌರಿ ಚೌರಾ ಘಟನೆಯ ನಂತರ ಅಸಹಕಾರ ಚಳವಳಿಯನ್ನು ನಿಲ್ಲಿಸಿದ ನಂತರ, ಕಾಂಗ್ರೆಸ್‍ಸಿನೊಳಗೆ ರೂಪುಗೊಂಡ ಭಿನ್ನಾಭಿಪ್ರಾಯ-ಬಿರುಕುಗಳಲ್ಲಿ, ನೆಹರು ಗಾಂಧಿಗೆ ನಿಷ್ಠಾವಂತರಾಗಿದ್ದರು. ಅವರ ತಂದೆ ಮೋತಿಲಾಲ್ ನೆಹರೂ ಮತ್ತು ಸಿ.ಆರ್.ದಾಸರಿಂದ ರೂಪುಗೊಂಡ ಸ್ವರಾಜ್ ಪಕ್ಷದೊಂದಿಗೆ ನೆಹರು ಸೇರಲಿಲ್ಲ. [29] [30]
ಭಾರತೀಯ ಸ್ವಾತಂತ್ರ್ಯಕ್ಕಾಗಿ ಅಂತರರಾಷ್ಟ್ರೀಕರಣದ ಹೋರಾಟ
[ಬದಲಾಯಿಸಿ]- ಭಾರತದ ಸ್ವಾತಂತ್ರ್ಯ ಹೋರಾಟದ ಅಂತರರಾಷ್ಟ್ರೀಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದರು. ಅವರು ಭಾರತಕ್ಕೆ ವಿದೇಶಿ ಮೈತ್ರಿಕೂಟಗಳನ್ನು ಕೋರಿದರು ಮತ್ತು ಪ್ರಪಂಚದಾದ್ಯಂತ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ನೆಡೆದ ಚಳುವಳಿಗಳೊಂದಿಗೆ ಸಂಪರ್ಕ ಕಲ್ಪಿಸಿದರು. 1927 ರಲ್ಲಿ ಬೆಲ್ಜಿಯಂನಲ್ಲಿ ಬ್ರಸೆಲ್ಸ್’ನಲ್ಲಿ ರಾಷ್ಟ್ರೀಯತೆಯನ್ನು ದಬ್ಬಾಳಿಕೆಗೆಒಳಗಾದ ಕಾಂಗ್ರೆಸ್’(ಸಮ್ಮೇಳನಕ್ಕೆ) ಗೆ ಹಾಜರಾಗಲು ಭಾರತದ ಕಾಂಗ್ರೆಸ್’ಗೆ ಆಹ್ವಾನ ನೀಡಲಾಯಿತು. ಸಾಮ್ರಾಜ್ಯಶಾಹಿ ವಿರುದ್ಧ ಸಾಮಾನ್ಯ ಹೋರಾಟವನ್ನು ಸಂಘಟಿಸಲು ಮತ್ತು ಯೋಜಿಸಲು ಸಭೆಯನ್ನು ಕರೆಯಲಾಯಿತು. ನೆಹರು ಭಾರತವನ್ನು ಪ್ರತಿನಿಧಿಸಿದರು ಮತ್ತು ಈ ಸಭೆಯಲ್ಲಿ ಜನಿಸಿದ ಇಂಪೀರಿಯಲ್’- ವಾದದ ವಿರುದ್ಧ ಲೀಗ್’ನ ಕಾರ್ಯನಿರ್ವಾಹಕ ಕೌನ್ಸಿಲ್ಲಿಗೆ ಆಯ್ಕೆಯಾದರು.[೨೨]
- ಹೆಚ್ಚೂ ಕಮ್ಮಿ, ಜಗತ್ತಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ, ಸ್ವಾತಂತ್ರ್ಯಕ್ಕಾಗಿ ಸಾಮ್ರಾಜ್ಯದ ವಿವಿಧ ವಸಾಹತುಗಳು ಮತ್ತು ಅವುಗಳ ಪ್ರಾಬಲ್ಯಗಳ ವಿರುದ್ಧ ಹೋರಾಟ, ಬಹು-ರಾಷ್ಟ್ರೀಯ ಪ್ರಯತ್ನ, ಇವುಗಳನ್ನು ನೆಹರು ಕಂಡರು; ಆದಾಗ್ಯೂ, ಈ ವಿಷಯದ ಬಗ್ಗೆ ಅವರ ಕೆಲವು ಹೇಳಿಕೆಗಳು, ಹಿಟ್ಲರನ ಉದಯ ಮತ್ತು ಅವರ ಸಮರ್ಥನೆಯ ಉದ್ದೇಶಗಳೊಂದಿಗೆ ಜಟಿಲತೆಯಿಂದ ಕೂಡಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿವೆ. ಈ ಆರೋಪಗಳ ಮುಖಾಂತರ ನೆಹರು, " ನಾವು ಪ್ಯಾಲೆಸ್ಟೈನಿನಲ್ಲಿನ ಅರಬ್ಬರ ರಾಷ್ಟ್ರೀಯ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ ಏಕೆಂದರೆ ಅದು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಿರ್ದೇಶಿಸಲ್ಪಟ್ಟಿತ್ತು. ಪ್ಯಾಲೆಸ್ಟೈನ್ ಬಗೆಗೆ ನಮ್ಮ ಸಹಾನುಭೂತಿ ಹಿಟ್ಲರನ ಹಿತಾಸಕ್ತಿಗಳಿಗೆ ಸರಿಹೊಂದುವ ಸಂಗತಿಯಿಂದ ನಮ್ಮ ಆ ಚಳುವಳಿಯ ಬಗ್ಗೆ ಸಹಾನುಭೂತಿಯನ್ನು ದುರ್ಬಲಗೊಳಿಸಲಾಗದು".
[೨೩]
1930 ರ ಮಧ್ಯಕಾಲ
[ಬದಲಾಯಿಸಿ]- 1930 ರ ದಶಕದ ಮಧ್ಯಭಾಗದಲ್ಲಿ, ನೆಹರು [[ಯುರೋಪ್‍ನಲ್ಲಿನ ಬೆಳವಣಿಗೆಗಳ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದರು, ಅದು ಮತ್ತೊಂದು ವಿಶ್ವ ಯುದ್ಧದ ಕಡೆಗೆ ತಿರುಗುತ್ತಿತ್ತು. ಅವರು 1936 ರ ಆರಂಭದಲ್ಲಿ ಯೂರೋಪಿನಲ್ಲಿದ್ದರು. ಸ್ವಿಜರ್ಲ್ಯಾಂಡ್ನಲ್ಲಿನ ಸ್ಯಾನಿಟೇರಿಯಮ್ನಲ್ಲಿ ಅವರು ಕೆಲವೇ ದಿನಗಳಲ್ಲಿ ಸಾಯುವ ಸ್ಥಿತಿಯಲ್ಲದ್ದ, ಅವರ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡಿದರು. ಈ ಸಮಯದಲ್ಲೂ ಸಹ, ಯುದ್ಧದ ಸಂದರ್ಭದಲ್ಲಿ, ಭಾರತವು ಪ್ರಜಾಪ್ರಭುತ್ವಗಳ ಜೊತೆಯಲ್ಲಿರುವುದಾಗಿಯೂ, ಆದರೂ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್’ನ ಜೊತೆ ಸ್ವತಂತ್ರ ರಾಷ್ಟ್ರವಾಗಿ ಭಾರತವು ಮಾತ್ರ ಹೋರಾಟ ನಡೆಸಬಹುದೆಂದು ಅವರು ಒತ್ತಾಯಿಸಿದರು [೨೪]
ಸುಭಾಷ್ ಚಂದ್ರ ಬೋಸ್ ಅವರಿಂದ ದೂರವಾದುದು
[ಬದಲಾಯಿಸಿ]- ನೆಹರೂ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಜಗತ್ತಿನಾದ್ಯಂತ ಸ್ವತಂತ್ರ ರಾಷ್ಟ್ರಗಳ ಸರಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಆದಾಗ್ಯೂ, 1930 ರ ದಶಕದ ಅಂತ್ಯದಲ್ಲಿ ಪರಸ್ಪರ ದೂರವಾದರು., ಬೋಸರು ಬ್ರಿಟಿಷರನ್ನು ಭಾರತದ ಹೊರಗೆ ಹಾಕುವಲ್ಲಿ ಫ್ಯಾಸಿಸ್ಟರ (ಜರ್ಮನಿಯ ಹಿಟ್ಲರನ ಏಕ ಪಕ್ಷೀಯ ಆಡಳಿತ) ಸಹಾಯ ಪಡೆಯಲು ಒಪ್ಪಿಕೊಂಡಾಗ ನೆಹರೂ ಸುಭಾಷ್’ರಿಂದ ದೂರವಾದರು. ಅದೇ ಸಮಯದಲ್ಲಿ, ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಫ್ರಾನ್ಸಿಸ್ಕೊ ಫ್ರಾಂಕೊ ಅವರ ಪಡೆಗಳ ವಿರುದ್ಧ ಹೋರಾಡಿದ ರಿಪಬ್ಲಿಕನ್ನರನ್ನು ನೆಹರೂ ಬೆಂಬಲಿಸಿದರು. ನೆಹರು ಅವರ ಸಹಾಯಕ ವಿ. ಕೆ. ಕೃಷ್ಣ ಮೆನನ್ ಅವರೊಂದಿಗೆ ಸ್ಪೇನಿಗೆ ಭೇಟಿ ನೀಡಿದರು ಮತ್ತು ರಿಪಬ್ಲಿಕನ್ ಪಕ್ಷದ ಬೆಂಬಲವನ್ನು ಘೋಷಿಸಿದರು., ಮುಸೊಲಿನಿ ನೆಹರೂ ಅವರನ್ನು ಭೇಟಿಯಾಗಲು ತನ್ನ ಆಸೆಯನ್ನು ವ್ಯಕ್ತಪಡಿಸಿದನು; .ಆದರೆ ನಂತರ ಇಟಲಿಯ ಸರ್ವಾಧಿಕಾರಿಯಾದ ಬೆನಿಟೊ ಅವರನ್ನು ಭೇಟಿಯಾಗಲು ನೆಹರೂ ನಿರಾಕರಿಸಿದರು. [೨೫]
ರಿಪಬ್ಲಿಕನ್ ಸಿದ್ಧಾಂತ
[ಬದಲಾಯಿಸಿ]- ಭಾರತೀಯ ರಾಜಕುಮಾರರು ಆಳಿದ ರಾಜ್ಯಗಳಲ್ಲಿನ ಜನರ ನೋವುಗಳನ್ನು ಅರಿತುಕೊಳ್ಳುವ ಮೊದಲ ರಾಷ್ಟ್ರೀಯ ನಾಯಕರಲ್ಲಿ ನೆಹರು ಒಬ್ಬರಾಗಿದ್ದರು. ಭ್ರಷ್ಟ ಮಹಾಮಂತ್ರಿಗಳ ವಿರುದ್ಧ ಸಿಖ್ಖರು ನಡೆಸುತ್ತಿದ್ದ ಹೋರಾಟವನ್ನು ನೋಡಲು ಅವರು ಅಲ್ಲಿಗೆ ಹೋದಾಗ, ನಭಾ ಎಂಬ ರಾಜನ ಆಜ್ಞೆಯಿಂದ ಅವರು ಜೈಲು ಶಿಕ್ಷೆ ಅನುಭವಿಸಿದರು. ರಾಷ್ಟ್ರೀಯತಾವಾದಿ ಚಳವಳಿಯು ನೇರವಾಗಿ ಬ್ರಿಟಿಷ್ ಆಳ್ವಿಕೆಯ ಅಡಿಯಲ್ಲಿರುಚ ಪ್ರದೇಶಗಳಿಗೆ ಸೀಮಿತವಾಗಿತ್ತು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯತಾವಾದಿ ಚಳವಳಿಯ ಭಾಗವಾಗಿ ರಾಜರ ರಾಜ್ಯಗಳಲ್ಲಿ ಜನರು ಹೋರಾಟ ಮಾಡಲು ಅವರು ಸಹಾಯ ಮಾಡಿದರು. 1927 ರಲ್ಲಿ “ಆಲ್ ಇಂಡಿಯಾ ಸ್ಟೇಟ್ಸ್ ಪೀಪಲ್ಸ್ ಕಾನ್ಫರೆನ್ಸ್” (ರಾಜರ ಆಳ್ವಿಕೆಯ ಜನರ ಸಮ್ಮೇಳನ) ರಚನೆಯಾಯಿತು. ಹಲವು ವರ್ಷಗಳ ಕಾಲ ರಾಜ ಸಂಸ್ಥಾನದ ಜನರಿಗೆ ನೆರವಾಗಿದ್ದ ನೆಹರು ಅವರು 1935 ರಲ್ಲಿ ನಡೆದ ಸಮಾವೇಶದ ಅಧ್ಯಕ್ಷರಾದರು.
- ಅವರು ರಾಜಕೀಯ ಶ್ರೇಣಿಯಕ್ರಮದಿಂದ ಸದಸ್ಯತ್ವ ಪಡೆಯಲು ಅದರ ಶ್ರೇಣಿಯನ್ನು ತೆರೆದರು. ಭಾರತದ ರಾಜಕೀಯ ಏಕೀಕರಣದ ಸಂದರ್ಭದಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ, ಭಾರತೀಯ ನಾಯಕರಿಗೆ ಸಹಾಯ ಮಾಡುತ್ತದೆ ಎಂಬ ಉದ್ದೇಶವಿತ್ತು.
- ಭಾರತದ ವರ್ಣರಂಜಿತ ರಾಜಕೀಯ ನಾಯಕರಾದ ವಲ್ಲಭಭಾಯ್ ಪಟೇಲ್ ಮತ್ತು ವಿ. ಪಿ. ಮೆನನ್’ರಿಗೆ, "ರಾಜರ ಆಳ್ವಿಕೆಯ ಜನರ ಸಮ್ಮೇ ಳನ"ದ ಅದ್ಯಕ್ಷರಾದ ನೆಹರು ಅವರು ರಾಜಪ್ರಭುತ್ವ ರಾಜ್ಯಗಳನ್ನು ಭಾರತದೊಳಗೆ ಸಂಯೋಜಿಸುವ ಕಾರ್ಯವನ್ನು ನಿಯೋಜಿಸಿದರು (1935). ನೂರಾರು ರಾಜರುಗಳೊಂದಿಗೆ ಮಾತುಕತೆ ನಡೆಸಿ ಭಾರತದ ರಾಜಕೀಯ ಏಕೀಕರಣವನ್ನು ಸಾಧಿಸಲು ಇವರು ಪ್ರಮುಖ ಪಾತ್ರವಹಿಸಬಲ್ಲರು ಎಂದು ಅವರು ನಂಬಿದ್ದರು. (ವಿ.ಪಿ.ಮೆನನ್, ನಂತರ ಪಟೇಲರ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಬ್ರಿಟಿಷರಿಂದ ಭಾರತ ವರ್ಗಾವಣೆಯ ಮತ್ತು ವಿಭಜನೆಯ ನೀತಿನಿಯಮಗಳ ಪತ್ರವನ್ನು ಸಿದ್ಧಪಡಿಸಿದರು.)[೨೬][೨೭][೨೮]
ರಾಜರ ಆಡಳಿತದ ರಾಜ್ಯಗಳ ಸಮಸ್ಯೆಗಳು
[ಬದಲಾಯಿಸಿ]- 1946 ರ ಜುಲೈನಲ್ಲಿ ಸ್ವತಂತ್ರ ಭಾರತದ ಸೈನ್ಯದ ವಿರುದ್ಧ ನಿಲ್ಲಬಲ್ಲ ಯಾವುದೇ ರಾಜಪ್ರಭುತ್ವದ ರಾಜ್ಯವು ತನ್ನ (ಬಲಿಷ್ಠ) ಸೈನ್ಯವನ್ನು ಹೊಂದಿಲ್ಲವೆಂದು ನೆಹರು ಗಮನಸೆಳೆದಿದ್ದಾರೆ. ಸ್ವತಂತ್ರ ಭಾರತವು “ರಾಜರ ದೈವಿಕ ಹಕ್ಕು” ನೀತಿನ್ನು ಒಪ್ಪುವುದಿಲ್ಲವೆಂದು 1947 ರ ಜನವರಿಯಲ್ಲಿ ಅವರು ಹೇಳಿದರು, ಮತ್ತು ಮೇ 1947 ರಲ್ಲಿ, “ಸಂವಿಧಾನ ಸಭೆಯೊಂದನ್ನು ಸೇರಲು ನಿರಾಕರಿಸಿದ ಯಾವುದೇ ರಾಜಪ್ರಭುತ್ವದ ರಾಜ್ಯವನ್ನು ಶತ್ರು ರಾಜ್ಯವೆಂದು ಪರಿಗಣಿಸಲಾಗುತ್ತದೆ”, ಎಂದರು. ಭಾರತದ ಸಂವಿಧಾನದ ಕರಡು ತಯಾರಿಸುವಾಗ, ಆ ಸಮಯದಲ್ಲಿನ ಅನೇಕ ಭಾರತೀಯ ಮುಖಂಡರು (ನೆಹರೂ ಹೊರತುಪಡಿಸಿ) ಪ್ರತಿ ರಾಜ ಸಂಸ್ಥಾನವು ಅಥವಾ ಒಡಂಬಡಿಕೆಯ ರಾಜ್ಯವು “ಫೆಡರಲ್ ರಾಜ್ಯವಾಗಿ” ಸ್ವತಂತ್ರವಾಗಿರಲು ಅನುವು ಮಾಡಿಕೊಡಬೇಕು ಎಂಬ ನೀತಿಯ ಪರವಾಗಿದ್ದರು, ಇದು ಮೂಲತಃ ಭಾರತ ಸರ್ಕಾರ ಕಾಯಿದೆ (1935) ರ ಅನುಸಾರವಾಗಿತ್ತು. ಆದರೆ ಸಂವಿಧಾನದ ಕರಡು ರಚನೆಯು ಪ್ರಗತಿಯಾದಾಗ ಮತ್ತು ಗಣರಾಜ್ಯ ರಚಿಸುವ ಕಲ್ಪನೆಯು ನಿರ್ದಿಷ್ಠ ಆಕಾರವನ್ನು ತೆಗೆದುಕೊಂಡಿತು ಅದು ನೆಹರು ಪ್ರಯತ್ನದ ಕಾರಣ, ಎಲ್ಲಾ ರಾಜರ ರಾಜ್ಯಗಳು / ಒಡಂಬಡಿಕೆಯ ರಾಜ್ಯಗಳು ಭಾರತೀಯ ಗಣರಾಜ್ಯದೊಂದಿಗೆ ವಿಲೀನಗೊಳ್ಳುತ್ತವೆ ಎಂದು ನಿರ್ಧರಿಸಲಾಯಿತು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿಯವರು 1969 ರಲ್ಲಿ ರಾಷ್ಟ್ರಪತಿ ಆದೇಶ ಹೊರಡಿಸಿ ಎಲ್ಲಾ ರಾಜ್ಯದ ರಾಜರ ರಾಜತ್ವದ ಅಧಿಕಾರವನ್ನು ರದ್ದುಗೊಳಿಸಿದರು. ಆದರೆ ಇದು ಭಾರತದ ಸುಪ್ರೀಂ ಕೋರ್ಟಿನಿಂದ ತಿರಸ್ಕರಿಸಲ್ಪಟ್ಟಿತು. ಅಂತಿಮವಾಗಿ, ಸಂವಿಧಾನದ 26 ನೇ ತಿದ್ದುಪಡಿಯಿಂದ ಸರ್ಕಾರವು ಭಾರತದ ರಾಜಪ್ರಭುತ್ವದ ರಾಜ್ಯಗಳನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಯಿತು. ನೆಹರು ಪ್ರಾರಂಭಿಸಿದ, ಈ ಸಂಸ್ಥಾನಗಳನ್ನು ಭಾರತದ ಪ್ರಜಾಪ್ರಭುತ್ದ ಆಡಳಿತದೊಳಗೆ ತರುವ ಪ್ರಕ್ರಿಯೆಯು' 1971 ರ ಅಂತ್ಯದ ವೇಳೆಗೆ ಅವರ ಮಗಳಿಂದ ಪೂರ್ಣಗೊಂಡಿತು. [೨೯][೩೦][೩೧]
1929ರ ಸ್ವಾತಂತ್ರ್ಯದ ಘೋಷಣೆ
[ಬದಲಾಯಿಸಿ]- ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಎಲ್ಲ ಸಂಬಂಧಗಳಿಂದ ಸಂಪೂರ್ಣ ಮತ್ತು ಸ್ಪಷ್ಟವಾದ ವಿದಾಯವನ್ನು (ಬಿಡುಗಡೆ) ಹೊಂದಲು ಕಾಂಗ್ರೆಸ್ ಪಕ್ಷವು ನಿರ್ಧರಿಸಬೇಕು ಎಂದು ಒತ್ತಾಯಿಸಿದ ಮೊದಲ ನಾಯಕರಲ್ಲಿ ನೆಹರು ಕೂಡ ಒಬ್ಬರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಅವರ ನಿರ್ಣಯವನ್ನು 1927 ರಲ್ಲಿ ಕಾಂಗ್ರೆಸ್’ನ ಮದ್ರಾಸ್ ಅಧಿವೇಶನದಲ್ಲಿ ಗಾಂಧೀಜಿಯವರ ಟೀಕೆಯ ಹೊರತಾಗಿಯೂ ಅಂಗೀಕರಿಸಲಾಯಿತು (ಪೂರ್ಣ ಸ್ವರಾಜ್ಯ ಬೇಡಿಕೆಯ ಘೋಷಣೆಗೆ ಇನ್ನೂ ಕಾಲ ಪಕ್ವವಾಗಿಲ್ಲ ಎಂಬುದು ಗಾಂದೀಜಿಯವರ ಅಭಿಪ್ರಾಯವಾಗಿತ್ತು). ಆ ಸಮಯದಲ್ಲಿ ನೆಹರು ಅವರು ಪೂರ್ಣ ಸ್ವಾತಂತ್ರದ ಬಗ್ಗೆ ಒತ್ತಡ ಹಾಕಲು ಕಾಂಗ್ರೆಸ್ಸಿನ ಒಳಗಿನ ಒಂದು ಒತ್ತಡದ ಗುಂಪನ್ನು ರಚಿಸಿದರು. ಅದು “ಸ್ವಾತಂತ್ರ್ಯಕ್ಕಾಗಿ ಇಂಡಿಯಾ ಲೀಗ್” ಎಂಬ ಎಂಬ ಕೂಟ.[೩೨] [47] [48]
- 1928 ರಲ್ಲಿ, ಗಾಂಧೀಜಿಯವರು ನೆಹರು ಅವರ ಬೇಡಿಕೆಗಳಿಗೆ ಒಪ್ಪಿಕೊಂಡರು ಮತ್ತು ಬ್ರಿಟಿಷರಿಗೆ ಎರಡು ವರ್ಷಗಳಲ್ಲಿ ಭಾರತಕ್ಕೆ ಡೊಮಿನಿಯನ್ ಅಧಿಕಾರ ಸ್ಥಾನಮಾನ ನೀಡಲು ಕರೆಕೊಡುವ ನಿರ್ಣಯವನ್ನು ಪ್ರಸ್ತಾವಿಸಿದರು. ಗಡುವು ಪೂರೈಸಲು ಬ್ರಿಟಿಷರು ವಿಫಲವಾದರೆ, ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಎಲ್ಲಾ ಭಾರತೀಯರಿಗೆ ಕರೆನೀಡುತ್ತದೆ ಎಂಬುದಕ್ಕೆ ನೆಹರು ಒಪ್ಪ್ಪಿದರು. ಆದರೆ ಬ್ರಿಟಿಷರಿಗೆ ನೀಡಿದ ಎರಡು ವರುಷದ ಸಮಯವನ್ನು ವಿರೋಧಿಸಿದ ನಾಯಕರಲ್ಲಿ ನೆಹರೂ ಒಬ್ಬರಾಗಿದ್ದರು - ಅವರು ಬ್ರಿಟಿಷರಿಂದ ತಕ್ಷಣದ ಕ್ರಮಗಳನ್ನು ಒತ್ತಾಯಿಸಲು ಗಾಂಧಜಿಯನ್ನು ಒತ್ತಾಯಿಸಿದರು. ಗಾಂಧಿಯವರು ಎರಡು ವರ್ಷಗಳಿಂದ ಒಂದು ಅವಧಿಗೆ ಸಮಯವನ್ನು ಕಡಿಮೆ ಮಾಡಿ ಮತ್ತಷ್ಟು ರಾಜಿ ಮಾಡಿಕೊಂಡರು. ಹೊಸ ನಿರ್ಣಯಕ್ಕೆ ಮತ ಚಲಾಯಿಸಲು ನೆಹರು ಒಪ್ಪಿಕೊಂಡರು.[೩೩]
- ಡೊಮಿನಿಯನ್ ಸ್ಥಾನಮಾನದ ಬೇಡಿಕೆಗಳನ್ನು ಬ್ರಿಟಿಷರು 1929 ರಲ್ಲಿ ತಿರಸ್ಕರಿಸಿದರು. 1929 ರ ಡಿಸೆಂಬರ್ 29 ರಂದು ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ನೆಹರು ವಹಿಸಿಕೊಂಡರು ಮತ್ತು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆಕೊಡುವ ಯಶಸ್ವಿ ನಿರ್ಣಯವನ್ನು ಮಂಡಿಸಿದರು. [೩೪]
ಸ್ವಾತಂತ್ರ್ಯದ ಘೋಷಣೆಯ ಕರಡು ಪ್ರತಿ (ಡ್ರಾಫ್ಟ್)
[ಬದಲಾಯಿಸಿ]- ಭಾರತದ ಸ್ವಾತಂತ್ರ್ಯದ ಘೋಷಣೆಯ ಕರಡನ್ನು ನೆಹರೂ ಮಾಡಿದರು. ಅದು ಹೀಗಿತ್ತು(ಕರಡು:ತಿದ್ದುಪಡಿ ಮಾಡದ ಮೂಲ ಪ್ರತಿ):
- ಸ್ವಾತಂತ್ರ್ಯವನ್ನು ಹೊಂದಲು ಮತ್ತು ಅವರ ಶ್ರಮದ ಫಲವನ್ನು ಅನುಭವಿಸಲು ಮತ್ತು ಜೀವನದ ಅಗತ್ಯತೆಗಳನ್ನು ಹೊಂದಲು, ಅವರು ಜನರಿಗೆ ಅಭಿವೃದ್ಧಿಗಾಗಿ ಪೂರ್ಣ ಅವಕಾಶಗಳನ್ನು ಹೊಂದಲು ಸಾಧ್ಯವಾಗುವಂತೆ, ಇತರ ಜನರಂತೆ, ಭಾರತೀಯ ಜನರ ಪ್ರಶ್ನಾತೀತವಾದ ಹಕ್ಕಿದೆ ಎಂದು ನಾವು ನಂಬುತ್ತೇವೆ. ಯಾವುದೇ ಸರ್ಕಾರವು ಈ ಹಕ್ಕುಗಳ ಜನರನ್ನು ಹಿಂತೆಗೆದುಕೊಂಡು ಅವರನ್ನು ದಮನಮಾಡಿದರೆ ಜನರು ಅದನ್ನು ಬದಲಾಯಿಸುವ ಅಥವಾ ಅದನ್ನು ರದ್ದುಗೊಳಿಸುವುದಕ್ಕೆ ಮತ್ತಷ್ಟು ಹಕ್ಕನ್ನು ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ಭಾರತದಲ್ಲಿ ಬ್ರಿಟಿಷ್ ಸರ್ಕಾರವು ಭಾರತೀಯ ಜನರ ಸ್ವಾತಂತ್ರ್ಯವನ್ನು ವಂಚಿತಗೊಳಿಸಿದ್ದು ಮಾತ್ರವಲ್ಲದೆ ಆ ಜನಸಾಮಾನ್ಯರ ಶೋಷಣೆಯ ಮೇಲೆ ತನ್ನನ್ನು ಅವಲಂಬಿಸಿಕೊಂಡಿದೆ ಮತ್ತು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾರತವನ್ನು ನಾಶಪಡಿಸಿದೆ. ಹಾಗಾಗಿ, ಭಾರತವು ಬ್ರಿಟಿಷ್ ಸಂಪರ್ಕದಿಂದ ಬೇರ್ಪಡಬೇಕು ಮತ್ತು ಪೂರ್ಣ ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಬೇಕು ಎಂದು ನಾವು ನಂಬುತ್ತೇವೆ.[೩೫]
- ಹೊಸ ವರ್ಷದ ಮುನ್ನಾದಿನದ 1929 ರ ಮಧ್ಯರಾತ್ರಿ, ನೆಹರು ಅವರು ಲಾಹೋರ್’ನಲ್ಲಿ ರಾವಿನದಿ ತೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. “ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ಓದಲಾಗಿದೆ, ಇದರಲ್ಲಿ ತೆರಿಗೆಯನ್ನು ತಡೆಹಿಡಿಯುವ ಸಿದ್ಧತೆ ಸೇರಿದೆ”. ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಬೃಹತ್ ಕೂಟವನ್ನು ಅವರು ಈ ಘೋಷಣೆಯನ್ನು ಒಪ್ಪಿಕೊಂಡರೇ ಎಂದು ಕೇಳಲಾಯಿತು, ಮತ್ತು ಬಹುಪಾಲು ಜನರು ತಮ್ಮ ಕೈಗಳನ್ನು ಎತ್ತಿ ಅನುಮೋದನೆಯ ಒಪ್ಪಿಗೆಗೆ ಸಾಕ್ಷಿಯಾಗಿದ್ದರು. ಕೇಂದ್ರ ಮತ್ತು ಪ್ರಾಂತೀಯ ಶಾಸನಸಭೆಗಳ 172 ಭಾರತೀಯ ಸದಸ್ಯರು ಭಾರತೀಯ ಸಾರ್ವಜನಿಕರ ಭಾವನೆಗಳಿಗೆ ಅನುಗುಣವಾಗಿ ನಿರ್ಣಯಕ್ಕೆ ಬೆಂಬಲ ನೀಡಿ ರಾಜಿನಾಮೆ ಸಲ್ಲಿಸಿದರು. ಜನವರಿ 26 ರಂದು ಸ್ವಾತಂತ್ರ್ಯ ದಿನವೆಂದು ಆಚರಿಸಲು ಕಾಂಗ್ರೆಸ್ ಜನರನ್ನು ಕೇಳಿತು. ಭಾರತದ ಧ್ವಜವನ್ನು ಕಾಂಗ್ರೆಸ್’ನ ಸ್ವಯಂಸೇವಕರು, ರಾಷ್ಟ್ರೀಯವಾದಿಗಳು ಮತ್ತು ಸಾರ್ವಜನಿಕರು ಇವರಿಂದ ಸಾರ್ವಜನಿಕವಾಗಿ ಭಾರತದಾದ್ಯಂತ ಹಾರಿಸಲ್ಪಟ್ಟಿತು. ಸಾಮೂಹಿಕ ನಾಗರಿಕ ಅಸಹಕಾರಕ್ಕಾಗಿ ಯೋಜನೆಗಳು ನಡೆಯುತ್ತಿದ್ದವು.
- 1929 ರಲ್ಲಿ ಕಾಂಗ್ರೆಸ್ನ ಲಾಹೋರ್ ಅಧಿವೇಶನದ ನಂತರ, ನೆಹರೂ ಕ್ರಮೇಣ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಧಾನ ನಾಯಕನಾಗಿ ಹೊರಹೊಮ್ಮಿದರು. ಗಾಂಧಿಯವರು ಹೆಚ್ಚು ಆಧ್ಯಾತ್ಮಿಕ ಪಾತ್ರಕ್ಕೆ ಮರಳಿದರು. ಗಾಂಧಿಯವರು 1942 ರವರೆಗೆ ನೆಹರು ಅವರನು ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ನೇಮಿಸಲಿಲ್ಲವಾದರೂ, 1930 ರ ದಶಕದ ಮಧ್ಯಭಾಗದಲ್ಲಿಯೇ ನೆಹರು ದೇಶಕ್ಕೆ ಗಾಂಧಿಯ ಸ್ವಾಭಾವಿಕ ಉತ್ತರಾಧಿಕಾರಿಯಾಗಿ ಪರಿಗಣಿಸಲ್ಪಟ್ಟಿದ್ದರು. [೩೬]
ಅಹಿಂಸಾತ್ಮಕ ಅಸಹಕಾರ ಚಳುವಳಿ
[ಬದಲಾಯಿಸಿ]- ಬ್ರಿಟಿಷ್’ರಿಂದ ಉಪ್ಪು ತೆರಿಗೆಗೆ ಗುರಿಯಾಗಿದ ಕಾರಣ ಅದರ ವಿರುದ್ಧ ಸತ್ಯಾಗ್ರಹ ಮಾಡುವದರೊಂದಿಗೆ “ನಾಗರಿಕ ಅಸಹಕಾರ ಚಳುವಳಿಯನ್ನು ಪ್ರಾರಂಭಿಸುವ ಗಾಂಧಿಯವರ ಯೋಜನೆ ಬಗ್ಗೆ ನೆಹರು ಮತ್ತು ಕಾಂಗ್ರೆಸ್ನ ಹೆಚ್ಚಿನ ನಾಯಕರು ಆರಂಭದಲ್ಲಿ ಅದರ ಪರಿಣಾಮದ ಬಗ್ಗೆ ಸಂಶಯ ಪಟ್ಟಿದ್ದರು. (ಸಮುದ್ರದಲ್ಲಿಯಾಗಲಿ ಅಥವಾ ಬೇರೆ ವಿಧದಿಂದಲಾಗಲಿ ಬಾರತೀಯರು ಉಪ್ಪು ತಯಾರಿಸುವಂತಿರಲಿಲ್ಲ. ಅದು ಅಪರಾಧವೆಂಬ ಕಾನೂನು. ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಡುವುದು – ಜೈಲಿಗೆ ಹೋಗುವುದು ಸತ್ಯಾಗ್ರಹ.) ಪ್ರತಿಭಟನೆಯು ಬಿಸಿ ಏರಿದ ನಂತರ, “ಉಪ್ಪಿನ ಸಂಕೇತದ ಶಕ್ತಿ”ಯನ್ನು ನೆಹರು ಅವರು ಅರಿತುಕೊಂಡರು. ನೆಹರು ಈ ಪ್ರತಿಭಟನೆಯ ಅಭೂತಪೂರ್ವ ಜನಪ್ರಿಯ ಪ್ರತಿಕ್ರಿಯೆಯ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು: "ಒಂದು ವಸಂತಕಾಲವು ಇದ್ದಕ್ಕಿದ್ದಂತೆ ಹೊರಹೊಮ್ಮಿರುವಂತೆ ಕಾಣುತ್ತದೆ". [57] ನೆಹರು ರಾಯಪುರಕ್ಕೆ ಅಲಹಾಬಾದ್’ನಿಂದ ಬಂದ ರೈಲಿನ ಸಂದರ್ಭದಲ್ಲಿ 14 ಏಪ್ರಿಲ್ 1930 ರಂದು ಅವರನ್ನು ಬಂಧಿಸಲಾಯಿತು. ಅದಕ್ಕೆ ಮೊದಲು ಅವರು ಒಂದು ದೊಡ್ಡ ಸಭೆ ನಡೆಸಿ ದೊಡ್ಡ ಮೆರವಣಿಗೆಯನ್ನು ನಡೆಸಿದ ನಂತರ, ಸರ್ಕಾರದಿಂದ ನಿóಷೇಧಿಸಲ್ಪಟ್ಟ (ಕಾಂಟ್ರಾಬ್ಯಾಂಡ್) ಉಪ್ಪನ್ನು ಸಂಭ್ರಮೋತ್ಸವವದಿಂದ ಬಹಿರಂಗವಾಗಿ ತಯಾರಿಸಿದರು. “ಉಪ್ಪು ಕಾನೂನಿನ” ಉಲ್ಲಂಘನೆಯ ಕಾರಣ ಅವರನ್ನು ಬಂಧಿಸಲಾಯಿತು, ಜೈಲು ಗೋಡೆಗಳ ಹಿಂದೆಯೇ ಅವರನ್ನು ಸಂಕ್ಷಿಪ್ತವಾಗಿ ವಿಚಾರಣೆ ನೆಡೆದರು ಮತ್ತು ಅವರಿಗೆ ಆರು ತಿಂಗಳ ಸೆರೆವಾಸ ವಿಧಿಸಲಾಯಿತು.
- ನೆಹರು ಅವರು ಜೈಲಿನಲ್ಲಿ ಇದ್ದಾಗ, ಗಾಂಧೀಜಿ ಅನುಪಸ್ಥತಿಯಲ್ಲಿ ಗಾಂಧಿ ಅವರನ್ನು ತಮ್ಮ ಉತ್ತರಾದಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿದರು, ಆದರೆ ಗಾಂಧಿಯವರು ಅದನ್ನು ನಿರಾಕರಿಸಿದರು, ಮತ್ತು ನೆಹರು ತನ್ನ ತಂದೆಯವರನ್ನು ಉತ್ತರಾಧಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮಕರಣ ಮಾಡಿದರು. ನೆಹರೂ ಅವರ ಬಂಧನದಿಂದಾಗಿ ನಾಗರಿಕ ಅಸಹಕಾರ ಚಳುವಳಿ ಹೊಸ ಗತಿ ಪಡೆದುಕೊಂಡು ತೀವ್ರವಾಯಿತು, ಮತ್ತು ಬಂಧನಗಳು ನೆಡೆದವು, ಜನಸಮೂಹದ ಮೇಲೆ ಗುಂಡುಹಾರಿಸಲಾಯಿತು ಮತ್ತು ಲಾಠಿ ಛಾರ್ಜಗಳು ಎಲ್ಲೆಡೆಯೂ ಸಾಮಾನ್ಯ ಘಟನೆಗಳಾಗಿ ನೆಡೆಯಿತು.
[೩೭]
ಉಪ್ಪಿನ ಸತ್ಯಾಗ್ರಹದ ಯಶಸ್ಸು
[ಬದಲಾಯಿಸಿ]ಉಪ್ಪಿನ ಸತ್ಯಾಗ್ರಹವು ಪ್ರಪಂಚದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇಂಡಿಯನ್, ಬ್ರಿಟಿಷ್, ಮತ್ತು ಪ್ರಪಂಚದ ಅಭಿಪ್ರಾಯಗಳು ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಹಕ್ಕುಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸಲು ಪ್ರಾರಂಭಿಸಿವೆ. ನೆಹರು ಅವರು ಉಪ್ಪಿನ ಸತ್ಯಾಗ್ರಹವನ್ನು ಗಾಂಧಿಯವರೊಂದಿಗಿನ ಅವರ ಸಂಬಂಧದ ಉನ್ನತ-ಚಿನ್ಹೆಯ ಗುರುತು ಎಂದು ಪರಿಗಣಿಸಿದರು, [60] ಮತ್ತು ಭಾರತೀಯರ ವರ್ತನೆಗಳನ್ನು ಬದಲಿಸುವಲ್ಲಿ ಇದು ಶಾಶ್ವತವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಭಾವಿಸಿದರು:
- “ಖಂಡಿತ ಈ ಚಳುವಳಿ ಬ್ರಿಟಿಷ್ ಸರಕಾರದ ಮೇಲೆ ಭಾರಿ ಒತ್ತಡವನ್ನು ಬೀರಿತು ಮತ್ತು ಸರ್ಕಾರಿ ಯಂತ್ರಗಳನ್ನು ಬೆಚ್ಚಿಬೀಳಿಸಿತ್ತು. ಆದರೆ ಇದಕ್ಕೆ ನನ್ನ (ನೆಹರು) ಪ್ರಾಮುಖ್ಯತೆ, ನಮ್ಮ ಜನರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಮೇಲೆ ಬೀರಿದ ಪರಿಣಾಮ. ... ಅಸಹಕಾರ ಅವರನ್ನು ಕಿರಿದಾದಿಂದ ಕೂಪದಿಂದ ಹೊರಗೆ ಎಳೆದುಕೊಂಡು ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ನೀಡಿತು. ... ಅವರು ಧೈರ್ಯದಿಂದ ವರ್ತಿಸಿದರು ಮತ್ತು ಅನ್ಯಾಯದ ದಬ್ಬಾಳಿಕೆಗೆ ಸುಲಭವಾಗಿ ಒಪ್ಪಲಿಲ್ಲ; ಅವರ ದೃಷ್ಟಿಕೋನವು ವಿಸ್ತಾರವಾಯಿತು ಮತ್ತು ಅವರು ಭಾರತವನ್ನು ಒಂದು ಘಟಕವಾಗಿ ಸ್ವಲ್ಪಮಟ್ಟಿಗೆ ಯೋಚಿಸಲಾರಂಭಿಸಿದರು. ... ಇದು ಗಮನಾರ್ಹ ಬದಪಾವಣೆಯಾಗಿತ್ತು. ಇದರ ಕೀರ್ತಿ ಗಾಂಧಿಯವರ ನಾಯಕತ್ವದ ಕಾಂಗ್ರೆಸ್’ಗೆ ಅದರ ಕೀರ್ತಿ ಸೇರಬೇಕು.[೩೮]
ಆಧುನಿಕ ಭಾರತದ ಶಿಲ್ಪಿ
[ಬದಲಾಯಿಸಿ]- ಭವಿಷ್ಯ ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ನ್ಯಾಯದ ತಳಹದಿ: 1929 ರಲ್ಲಿ ಕಾಂಗ್ರೆಸ್ಸಿನ ನೀತಿಗಳನ್ನು ಮತ್ತು ಅವರ ನಾಯಕತ್ವದಲ್ಲಿ ಭವಿಷ್ಯದ ಭಾರತ-ರಾಷ್ಟ್ರವನ್ನು ನೆಹರು ವಿವರಿಸಿದರು. ಅವರು ಕಾಂಗ್ರೆಸ್ಸಿನ ಉದ್ದೇಶಗಳು ಧರ್ಮದ ಸ್ವಾತಂತ್ರ್ಯ, ಸಂಘಗಳನ್ನು ರೂಪಿಸುವ ಹಕ್ಕನ್ನು, ಆಲೋಚನೆಯ ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತಿ, ಬಣ್ಣ, ಮತ ಅಥವಾ ಧರ್ಮದ ವ್ಯತ್ಯಾಸವಿಲ್ಲದೆ ಪ್ರತಿ ವ್ಯಕ್ತಿಗೂ ಸಮಾನತೆಯ ಕಾನೂನು, ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಗಳಿಗೆ ರಕ್ಷಣೆ, ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳು, ಅಸ್ಪೃಶ್ಯತೆ ನಿರ್ಮೂಲನೆ, ವಯಸ್ಕ ಮತದಾನದ ಪರಿಚಯ, ನಿಷೇಧ ಹೇರುವುದು, ಕೈಗಾರಿಕೆಗಳ ರಾಷ್ಟ್ರೀಕರಣ, ಸಮಾಜವಾದ, ಮತ್ತು ಜಾತ್ಯತೀತ ಭಾರತವನ್ನು ಸ್ಥಾಪಿಸುವುದು. ಈ ಎಲ್ಲಾ ಉದ್ದೇಶಗಳು 1929-31ರಲ್ಲಿ ನೆಹರುರಿಂದ ರಚಿಸಲ್ಪಟ್ಟ "ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ನೀತಿ" ಯ ನಿರ್ಣಯದ ಮೂಲವು ರೂಪಿಸಿವೆ ಮತ್ತು ಅವು ಗಾಂಧಿಯವರ ನಾಯಕತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಅನುಮೋದಿಸಲ್ಪಟ್ಟವು. [೩೯][೪೦]
- ಸಮಾಜವಾದದ ಗುರಿಯನ್ನು ಸಾಧಿಸುವುದು ಅತ್ಯಂತ ಕಷ್ಟಕರವಾಗಿತ್ತು. ನೆಹರು ಅವರನ್ನು ಬಲಪಂಥೀಯ ಕಾಂಗ್ರೆಸ್ ಸದಸ್ಯರಾದ ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್ ಮತ್ತು ಸಿ. ರಾಜಗೋಪಾಲಾಚಾರಿ ಅವರು ವಿರೋಧಿಸಿದರು. ನೆಹರು ಅವರಿಗೆ ಎಡಪಂಥೀಯ ಕಾಂಗ್ರೆಸ್ ಸದಸ್ಯರಾದ ಮೌಲಾನಾ ಆಜಾದ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಬೆಂಬಲವಿತ್ತು. 1936 ರಲ್ಲಿ ಕಾಂಗ್ರೆಸ್ ಅಧ್ಯಕ್ಷತೆಯಿಂದ ಡಾ.ಪ್ರಸಾದರನ್ನು ಹೊರಗಿಡಲು ಈ ಮೂವರು ಸೇರಿಕೊಂಡರು. ನೆಹರೂ ಅವರ ಸ್ಥಾನದಲ್ಲಿ ಚುನಾಯಿತರಾದರು ಮತ್ತು ಎರಡು ವರ್ಷಗಳ ಕಾಲ (1936-37) ಅಧ್ಯಕ್ಷರಾದರು. ನಂತರ ಅವರ ಸಮಾಜವಾದಿ ಸಹೋದ್ಯೋಗಿಗಳಾದ ಬೋಸ್ (1938-39) ಮತ್ತು ಆಜಾದ್ (1940-46) ಅವರಿಂದ ಯಶಸ್ವಿಯಾದರು. ಭಾರತೀಯ ರಾಜಕೀಯದ ಮುಖ್ಯವಾಹಿನಿಯಿಂದ ಬೋಸರ ನಿರ್ಗಮನದ ನಂತರ (ಬ್ರಿಟಿಷರನ್ನು ಭಾರತದಿಂದ ಹೊರಗೆ ಓಡಿಸುವಲ್ಲಿ ಹಿಂಸಾಚಾರಕ್ಕೆ ನೀಡುವ ಬೆಂಬಲದಿಂದಾಗಿ ಬೋಸರು ಪ್ರತ್ಯೇಕವಾದರು,) ಸಮಾಜವಾದಿಗಳು ಮತ್ತು ಸಂಪ್ರದಾಯವಾದಿಗಳ ನಡುವಿನ ಅಧಿಕಾರದ ಹೋರಾಟ ಸಮತೋಲಿತವಾಗಿತ್ತು.ಆದರೆ, ಸರ್ದಾರ್ ಪಟೇಲ್ 1950 ರಲ್ಲಿ ನಿಧನರಾದರು, ಆಗ ನೆಹರೂ ಅವರು ಉಳಿದಿರುವ ಏಕೈಕ ರಾಷ್ಟ್ರೀಯ ನಾಯಕನಾಗಿದ್ದರು ಮತ್ತು ನೆಹರು ಅವರ ಹಲವು ಮೂಲಭೂತ ನೀತಿಗಳನ್ನು ಯಾರೂ ಅಡ್ಡಿಪಡಿಸದೆಯೇ ಇದ್ದುದರಿಂದ ನೆಹರೂಗೆ ಅವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು.ಭಾರತದ ಸಂಪ್ರದಾಯಶೀಲ ಬಲಪಂಥೀಯ ಕಾಂಗ್ರೆಸ್ (ಭಾರತದ ಮೇಲ್ವರ್ಗದ ಗಣ್ಯರು) ಅವರು ಸಮಾಜವಾದಿಗಳ ವಿರುದ್ಧ 1969 ರಲ್ಲಿ ನಡೆದ ದೊಡ್ಡ ಭಿನ್ನಾಭಿಪ್ರಾಯ ಕಾಂಗ್ರಸ್ಸನ್ನು ವಿಭಜಿಸಿತು. ಆಗ ನೆಹರುರ ಮಗಳು ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಪರಿಸ್ಥಿತಿಯಲ್ಲಿ ಅವರು ಭಾರತದ ಸಂವಿಧಾನದ 42 ನೇ ತಿದ್ದುಪಡಿಯಿಂದ (1976) ತನ್ನ ತಂದೆಯ ಕನಸನ್ನು ಪೂರೈಸಲು ಸಮರ್ಥರಾದರು, ಈ ಮೂಲಕ ಭಾರತವು ಅಧಿಕೃತವಾಗಿ "ಸಮಾಜವಾದಿ" "ಜಾತ್ಯತೀತ".ಎಂದು ಆಯಿತು. ಆ ನೀತಿಗೆ ಅನುಸರಿಸಿ ಭಾರತದ ಆರ್ಥಿಕ ಭದ್ರತೆಗೆ ಕಾರಣವಾದ ಬ್ಯಾಂಕ್‍ಗಳ ರಾಷ್ಟ್ರೀಕರಣ , ಜೀವವಿಮೆ ರಾಷ್ಟ್ರೀಕರಣ, ರಾಜಧನ ರದ್ದತಿ - ಬಡವರಿಗಾಗಿ 20 ಅಂಶದ ಕಾರ್ಯಕ್ರಮ ಇತ್ಯಾದಿಯನ್ನು ಜಾರಿಗೆ ತಂದರು.[೪೧][೪೨]
- ಭಾರತದ ವಿದೇಶಾಂಗ ನೀತಿಯ ರೂವಾರಿ; 1938 ರಲ್ಲಿಯೇ ರಾಷ್ಟ್ರೀಯ ಯೋಜನಾ ಆಯೋಗ ರಚನೆ: ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯದರ್ಶಿಯಾಗಿ ನೆಹರೂ ಅವರ ಎರಡನೆಯ ಅವಧಿಯಲ್ಲಿ, ಅವರು ಭಾರತದ ವಿದೇಶಿ ನೀತಿ ಬಗ್ಗೆ ಕೆಲವು ನಿರ್ಣಯಗಳನ್ನು ಪ್ರಸ್ತಾಪಿಸಿದರು. ಆ ಕಾಲದ ನಂತರ, ಯಾವುದೇ ಭವಿಷ್ಯದ ಭಾರತೀಯ ರಾಷ್ಟ್ರದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಅವರಿಗೆ ಪೂರ್ಣ ಸ್ವಾತಂತ್ರ್ಯವನ್ನು (ಕಾರ್ಟೆ ಬ್ಲಾಂಚನ್ನು) ನೀಡಿದರು. ಅವರು ವಿಶ್ವದಾದ್ಯಂತ ಸರ್ಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಪ್ರಪಂಚವು ಫ್ಯಾಸಿಸಮ್’ನ ಬೆದರಿಕೆಗೆ ಒಳಗಾದ ಸಮಯದಲ್ಲಿ ಅವರು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಕಡೆಗೆ ಭಾರತವನ್ನು ದೃಢವಾಗಿ ಇರಿಸಿದರು. ಭವಿಷ್ಯದ ಭಾರತದ ಆರ್ಥಿಕತೆಯನ್ನು ಯೋಜಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. ಇಂಥ ನೀತಿಗಳನ್ನು ರಚಿಸುವಲ್ಲಿ ಸಹಾಯ ಮಾಡಲು ಅವರು 1938 ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು ನೇಮಿಸಿದರು. ಆದಾಗ್ಯೂ, ನೆಹರು ಮತ್ತು ಅವರ ಸಹೋದ್ಯೋಗಿಗಳು ರಚಿಸಿದ ಅನೇಕ ಯೋಜನೆಗಳು 1947 ರಲ್ಲಿ ಭಾರತದ ಅನಿರೀಕ್ಷಿತ ವಿಭಜನೆಯಾದಾಗ ಕೃತಿಗೆ ಬರಲಾರದೆ ಅಪೂರ್ಣವಾದವು.[೪೩][೪೪]
1930 ರಲ್ಲಿ ಚುನಾವಣಾ ರಾಜಕೀಯ
[ಬದಲಾಯಿಸಿ]- ಮಾರ್ಕ್ಸ್‍ವಾದದ ಬಗೆಗೆ ಭ್ರಮನಿರಸನ:1936 ರಲ್ಲಿ ನೆಹರು ಅವರು ಯೂರೋಪಿಗೆ ಭೇಟಿ ನೀಡಿದಾಗ, ತಮ್ಮ ರಾಜಕೀಯ ಮತ್ತು ಆರ್ಥಿಕ ಚಿಂತನೆಯು ನಿಂತ ನೀರಿನಂತಿದೆ ಎಂದು ಅರಿವಾಯಿತು. ಮಾರ್ಕ್ಸಿಸಮ್ ಮತ್ತು ಅವರ ಸಮಾಜವಾದಿ ಚಿಂತನೆಯ ಬಗೆಗಿನ ಅವರ ನಿಜವಾದ ಆಸಕ್ತಿ ಆ ಪ್ರವಾಸದಿಂದ ಉದ್ಭವಿಸಿತು. ಜೈಲಿನಲ್ಲಿ ಅವರು ನಂತರದ ದಿನಗಳಲ್ಲಿ ಕಳೆದ ದಿನಗಳು, ಅವರಿಗೆ ಮಾರ್ಕ್ಸ್ವಾದವನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಲು ನೆರವಾದವು. ಮಾರ್ಕ್ಸ್ ವಾದದ ಚಿಂತನೆಗಳಲ್ಲಿ ಆಸಕ್ತಿ ಹೊಂದಿದರೂ, ಅದರ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಲು ಹಿಮ್ಮೆಟ್ಟುವಂತಾಯಿತು., ಅವರು ಸ್ವತಃ ಕಾರ್ಲ್ ಮಾರ್ಕ್ಸ ಬರಹಗಳನ್ನು ಪೂಜ್ಯಗ್ರಂಥದಂತೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಿರ್ಣಯಿಸಿದರು. ಅಂದಿನಿಂದಲೂ, ಅವರ ಆರ್ಥಿಕ ಚಿಂತನೆಯ ಗಜಕಡ್ಡಿಯು ಭಾರತೀಯ ಪರಿಸ್ಥಿತಿಗಳಿಗೆ ಅಗತ್ಯವಿದ್ದಲ್ಲಿ ಹೊಂದುವಂತೆ ಮಾತ್ರಾ ಮಾರ್ಕ್ಸ್‍ವಾದಿಯಾಗಿದ್ದು, ಆ ವಾದ ಅಲ್ಲಿಯೇ ಉಳಿಯಿತು.[೪೫]
- 1935 ರ ಅಧಿಯಮದಂತೆ ಪ್ರಾಂತೀಯ ಚುನಾಯಿತ ಸರ್ಕಾರಗಳ ರಚನೆ:ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು ಮತ್ತು ಒಕ್ಕೂಟದ ಯೋಜನೆಯಡಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನೆಹರೂರವರ ಆಂದೋಲನದ ಬಗೆಗೆ ಗಾಂಧಿಯವರು ಅಸಮ್ಮತಿ ವ್ಯಕ್ತಪಡಿಸಲಿಲ್ಲ, ಆದರೆ ಅವರು ರಾಜೀನಾಮೆ ನೀಡಿದ್ದರಿಂದ, ಭಾರತೀಯರೊಂದಿಗಿನ ಅವರ ಜನಪ್ರಿಯತೆಯು ಚುನಾವಣೆಯಲ್ಲಿ ಪಕ್ಷದಲ್ಲಿ ತಮ್ಮ ಸದಸ್ಯತ್ವದಿಂದ ಪ್ರಭಾವಿಸುವುದನ್ನು ನಿಲ್ಲಿಸಿತು. ಪ್ರಾಂತೀಯ ಸ್ವಾಯತ್ತತೆ (1935 ರ ಭಾರತ ಸರ್ಕಾರದ ಅಧಿನಿಯಮದಡಿಯಲ್ಲಿ) ಪ್ರಾಂತ್ಯದ ಸ್ವಾಯತ್ತತೆಯನ್ನು ಜಾರಿಗೊಳಿಸಿದ ನಂತರ ಚುನಾವಣೆಗಳು ನೆಡೆದು ಅದರಲ್ಲಿ ಬಹುಪಾಲು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ, ನೆಹರುರ ಜನಪ್ರಿಯತೆ ಮತ್ತು ಅಧಿಕಾರವು ಸಾಟಿಯಿಲ್ಲದವು ಎಮದು ರುಜುವಾತಾಯಿತು. ಮುಹಮ್ಮದ್ ಅಲಿ ಜಿನ್ನಾರವರ ಅಡಿಯಲ್ಲಿ ಮುಸ್ಲಿಮ್ ಲೀಗ್ (ಜಿನ್ನಾ- ಪಾಕಿಸ್ತಾನದ ಸೃಷ್ಟಿಕರ್ತರಾಗಲು ಕಾರಣರು) ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕಂಡಿತು. ಇದರಿಂದ ಭಾರತದಲ್ಲಿ ಮುಖ್ಯವಾಗಿ ಎರಡು ಪಕ್ಷಗಳು ಮಾತ್ರಾ ಇವೆ; ಅವು ಬ್ರಿಟಿಷ್ ರಾಜ್ ಮತ್ತು ಕಾಂಗ್ರೆಸ್ ಎಂದು ನೆಹರೂ ಘೋಷಿಸಿದರು. ಭಾರತೀಯ ರಾಜಕೀಯದಲ್ಲಿ ಮುಸ್ಲಿಂ ಲೀಗ್ ಮೂರನೆಯ ಮತ್ತು "ಸಮಾನ ಪಾಲುದಾರ" ಎಂಬ ಜಿನ್ನಾ ಹೇಳಿಕೆಗಳು ವ್ಯಾಪಕವಾಗಿ ತಿರಸ್ಕರಿಸಲ್ಪಟ್ಟವು. ಮೌಲಾನಾ ಆಜಾದರನ್ನು ಭಾರತೀಯ ಮುಸ್ಲಿಮರ ಮುಂಚೂಣಿ ಮುಖಂಡನಾಗಿ ನೇಮಕ ಮಾಡಲು ನೆಹರು ಆಶಿಸಿದರು, ಆದರೆ ಇದನ್ನು ಗಾಂಧಿಯವರು ಅಲಕ್ಷಿಸಿದರು, ಅವರು ಜಿನ್ನಾರನ್ನು ಭಾರತೀಯ ಮುಸ್ಲಿಮರ ಧ್ವನಿಯೆಂಬುದನ್ನು ಮುಂದುವರಿಸಿದರು. [೪೬]
ವಿಶ್ವ ಸಮರ- II ಮತ್ತು ಕ್ವಿಟ್ ಇಂಡಿಯಾ ಚಳುವಳಿ
[ಬದಲಾಯಿಸಿ]- 2 ನೇ ವಿಶ್ವ ಯುದ್ಧ ಪ್ರಾರಂಭವಾದಾಗ, ವೈಸ್ರಾಯ್ ಲಿನ್ಲಿತ್ಗೊವ್ ಅವರು ಏಕಪಕ್ಷೀಯವಾಗಿ ಭಾರತವು ಬ್ರಿಟನ್’ನಿನ ಪಕ್ಷದಲ್ಲಿ ಯುದ್ಧಮಾಡುವುದು ಎಂದರು. ಅವರು ಚುನಾಯಿತ ಭಾರತೀಯ ಪ್ರತಿನಿಧಿಗಳನ್ನು ಸಂಪರ್ಕಿಸದೆ ನಿರ್ಣಯ ತೆಗೆದುಕೊಂಡರು. ನೆಹರು ಚೀನಾಕ್ಕೆ ನೀಡಿದ ಭೇಟಿಯನ್ನು ಮೊಟಕುಗೊಲಿಸಿ ಬಾರತಕ್ಕೆ ಹಿಂದಿರುಗಿದರು. ನೆಹರೂ, "ಪ್ರಜಾಪ್ರಭುತ್ವ ಮತ್ತು ಫ್ಯಾಸಿಸಮ್ ನಡುವಿನ ಸಂಘರ್ಷದಲ್ಲಿ, ನಮ್ಮ ಸಹಾನುಭೂತಿಗಳು ಅನಿವಾರ್ಯವಾಗಿ ಪ್ರಜಾಪ್ರಭುತ್ವದ ಬದಿಯಲ್ಲಿರಬೇಕು .... ಭಾರತವು ಈ ವಿಷಯದಲ್ಲಿ ತನ್ನ ಸಂಪೂರ್ಣ ಪಾತ್ರವನ್ನು ತೊಡಗಿಸಲು ಮತ್ತು ತನ್ನ ಎಲ್ಲಾ ಸಂಪನ್ಮೂಲಗಳನ್ನು ಅದಕ್ಕೆ ಹಾಕಲು ನಾನು ಇಷ್ಟಪಡುತ್ತೇನೆ, ಅದು ಹೊಸ ವ್ಯವಸ್ಥೆಗೆ ದಾರಿಯಾಗಬೇಕು." ಎಂದು ಘೋಷಿಸಿದರು.[೪೭]
- ಹೆಚ್ಚಿನ ವಿವೇಚನೆಯ ನಂತರ, ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಸರ್ಕಾರಕ್ಕೆ ಸಹಕಾರ ನೀಡಲಿದೆ ಆದರೆ ಕೆಲವು ಷರತ್ತುಗಳೊಂದಿಗೆ ಎಂದು ತಿಳಿಸಿತು. ಮೊದಲನೆಯದಾಗಿ, ಯುದ್ಧದ ನಂತರ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡುವ ಭರವಸೆಯನ್ನು ಬ್ರಿಟನ್ ನೀಡಬೇಕು ಮತ್ತು ಹೊಸ ಸಂವಿಧಾನವನ್ನು ರಚಿಸುವ ಒಂದು ಸಂವಿಧಾನ ಸಭೆಯನ್ನು ರಚಿಸಲು ಚುನಾವಣೆಗೆ ಅನುಮತಿಸಬೇಕು; ಎರಡನೆಯದು, ಭಾರತೀಯ ಸೇನಾಪಡೆಯು ಬ್ರಿಟಿಷ್ ಕಮಾಂಡರ್-ಇನ್-ಚೀಫ್’ನ ಅಡಿಯಲ್ಲಿಯೇ ಇದ್ದರೂ, ಭಾರತೀಯರನ್ನು ತಕ್ಷಣವೇ ಕೇಂದ್ರ ಸರ್ಕಾರದಲ್ಲಿ ಸೇರಿಸಿಕೊಳ್ಳಬೇಕು; ಮತ್ತು ಅಧಿಕಾರ ಮತ್ತು ಜವಾಬ್ದಾರಿಯನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡಬೇಕು. ನೆಹರು ಅವರು ಲೆನ್ಲಿತ್ಗೋವ ಅವರಿಗೆ ಬೇಡಿಕೆಗಳನ್ನು ಮಂಡಿಸಿದಾಗ, ಅವರು ಅದನ್ನುನ್ನು ತಿರಸ್ಕರಿಸುವ ಆಯ್ಕೆ ಮಾಡಿದರು. ಇದರಿಂದ ಪರಿಸ್ಥತಿ ಕಗ್ಗಂಟು ಮಟ್ಟಕ್ಕೆ ತಲುಪಿತು. "ಅದೇ ಹಳೆಯ ಆಟವನ್ನು ಪುನಃ ಆಡಲಾಗುತ್ತದೆ", ಎಂದು ನೆಹರು ಗಾಂಧಿಗೆ ಕಠೋರವಾಗಿ ಬರೆದಿದ್ದಾರೆ, "ಹಿನ್ನೆಲೆ ಒಂದೇ ಆಗಿರುತ್ತದೆ, ವಿವಿಧ ಉಪಭಾಷೆಗಳು ಒಂದೇ ಆಗಿರುತ್ತವೆ ಮತ್ತು ನಟರು (ಪಾತ್ರಧಾರಿಗಳು) ಒಂದೇ ಆಗಿರುತ್ತವೆ ಮತ್ತು ಫಲಿತಾಂಶಗಳು ಒಂದೇ ಆಗಿರಬೇಕು".[೪೮]
- 23 ಅಕ್ಟೋಬರ್ 1939 ರಂದು, ಕಾಂಗ್ರೆಸ್ ವೈಸ್ರಾಯ್ ಅವರ ವರ್ತನೆಗಳನ್ನು ಖಂಡಿಸಿತು ಮತ್ತು ಪ್ರತಿಭಟನೆಯಾಗಿ ರಾಜೀನಾಮೆ ನೀಡಲು ವಿವಿಧ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸಚಿವಾಲಯಗಳನ್ನು ಆಹ್ವಾನಿಸಿತು (ಅನೇಕ ಪ್ರಾಂತ್ಯಗಳಲ್ಲಿ ಕಾಂಗ್ರಸ್ಸಿನ ಚುನಾಯಿತ ಸರ್ಕಾರ ಇತ್ತು). ಈ ನಿರ್ಣಾಯಕ ಘೋಷಣೆಗೆ ಮುಂಚಿತವಾಗಿ, ಜಿನ್ನಾ ಮತ್ತು ಮುಸ್ಲಿಂ ಲೀಗ್’ನ್ನು ಪ್ರತಿಭಟನೆಯಲ್ಲಿ ಸೇರಲು ನೆಹರೂ ಆಗ್ರಹಿಸಿದರು ಆದರೆ ಅದಕ್ಕೆ ಅವರು (ಜಿನ್ನಾ ಮತ್ತು ಲೀಗ್) ನಿರಾಕರಿಸಿತು. [೪೯]
ಪಾಕಿಸ್ತಾನ ನಿರ್ಣಯ
[ಬದಲಾಯಿಸಿ]- ಮಾರ್ಚ್ 1940 ರಲ್ಲಿ ಜಿನ್ನಾ "ಪಾಕಿಸ್ತಾನದ ನಿರ್ಣಯ" ಎಂದು ಕರೆಯಲ್ಪಡುವ ನಿರ್ಣಯವನ್ನು ಜಾರಿಗೆ ತಂದರು, ‘ರಾಷ್ಟ್ರ’ ದ ಯಾವುದೇ ವ್ಯಾಖ್ಯಾನದ ಪ್ರಕಾರ ಮುಸ್ಲಿಮರು ಒಂದು ರಾಷ್ಟ್ರ, ಮತ್ತು ಅವರು ತಮ್ಮ ನಾಡನ್ನು ಹೊಂದಲೇಬೇಕು,, ಹಾಗೆಯೇ ಅವರ ಪ್ರದೇಶ ಮತ್ತು ಅವರ ರಾಜ್ಯವನ್ನು ಹೊಂದಿರಬೇಕು" ಎಂದು ಘೋಷಿಸಿದರು.
- ಈ ಮುಸ್ಲಿಮರ ರಾಜ್ಯವನ್ನು ಪಾಕಿಸ್ತಾನವೆಂದು ಕರೆಯಲಾಗುತ್ತಿತ್ತು, ಇದರ ಅರ್ಥ "ಶುದ್ಧ ಭೂಮಿ" ಎಂದರು. ನೆಹರು ಕೋಪದಿಂದ ಇವು "ಎಲ್ಲಾ ಹಳೆಯ ಸಮಸ್ಯೆಗಳು ... ಲಾಹೋರಿನಲ್ಲಿ ಮುಸ್ಲಿಮ್ ಲೀಗ್ ಮುಖಂಡರು ತೆಗೆದುಕೊಂಡ ಇತ್ತೀಚಿನ ನಿಲುವಿನಲ್ಲಿ ಅವಿಭಾಜ್ಯತೆಗೆ ಒಳಗಾಗಿದ್ದಾರೆ" ಎಂದು ಘೋಷಿಸಿದರು. ಲಿನ್ಲಿತ್ಗೋ ನೆಹರೂಗೆ 8 ಅಕ್ಟೋಬರ್ 1940 ರಂದು ಒಂದು ಪ್ರಸ್ತಾವನೆಯನ್ನು ನೀಡಿದರು. ಬ್ರಿಟಿಷ್ ಸರ್ಕಾರದ ಉದ್ದೇಶವು ಭಾರತಕ್ಕೆ "ಡೊಮಿನಿಯನ್ ಸ್ಥಾನಮಾನ"$ ನೀಡುವುವೆಂದು ಅದು ಹೇಳಿದೆ. ಆದರೆ, ಇದು ಒಂದು ದಿನಾಂಕ ಅಥವಾ ಸಾಧನೆಯ ವಿಧಾನವನ್ನು ಉಲ್ಲೇಖಿಸಿಲ್ಲ. ಆದರೆ ಜಿನ್ನಾಗೆ ಮಾತ್ರ ಹೆಚ್ಚು ನಿಖರವಾದದ್ದು ಸಿಕ್ಕಿತ್ತು (ವಿಭಜನೆಯ ಭರವಸೆ). ವೈಸ್‍ರಾಯ್ ಲಿನ್ಲಿತ್ಗೋ ಹೇಳಿದರು "ಬ್ರಿಟಿಷರು ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದನ್ನು ಪರಿಗಣಿಸುವುದಿಲ್ಲ, ಅದರ ಅಧಿಕಾರವನ್ನು" ಭಾರತದ ರಾಷ್ಟ್ರೀಯ ಜೀವನದಲ್ಲಿ ದೊಡ್ಡ ಮತ್ತು ಶಕ್ತಿಯುತ ಅಂಶಗಳಿಂದ ನಿರಾಕರಿಸಲಾಗಿದೆ ". (ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದಿಲ್ಲ- ಕಾರಣ ಒಂದು ಶಕ್ತಿಯುತ ಅಂಶ ಅಡ್ಡ ಬಂದಿದೆ- ಅದು ಜಿನ್ನಾ ಮತ್ತು ಲೀಗ್- ಲೀಗ್ ಬ್ರಿಟಿಷರಿಂದ ಭರವಸೆ ಪಡೆದಿದೆ ಎಂದು ಅರ್ಥ)[80] [81]
- ಅಕ್ಟೋಬರ್ 1940 ರಲ್ಲಿ, ಗಾಂಧಿಯವರು ಮತ್ತು ನೆಹರೂ ಅವರು ಎರಡನೇ ಮಹಾ ಯುದ್ಧಕ್ಕೆ ಬ್ರಿಟನ್ನನ್ನು ಬೆಂಬಲಿಸುವ ತಮ್ಮ ನಿಲುವನ್ನು ಬಿಟ್ಟುಬಿಟ್ಟರು, ಒಂದು ಸೀಮಿತ ನಾಗರಿಕ ಅಸಹಕಾರ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದರು, ಇದರಲ್ಲಿ ಭಾರತದ ಸ್ವಾತಂತ್ರ್ಯದ ಪ್ರಮುಖ ವಕೀಲರು ಒಬ್ಬೊಬ್ಬರಾಗಿ ಭಾಗವಹಿಸಲು ಆಯ್ಕೆಯಾದರು. ನೆಹರುರನ್ನು ಬಂಧಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ದಿನ ಕಳೆದ ನಂತರ, ಹವಾಯಿಯಲ್ಲಿನ ಪರ್ಲ್ ಹಾರ್ಬರ್ ಬಾಂಬ್ ದಾಳಿಯ ಮೂರು ದಿನಗಳ ಮುಂಚೆ, ಇತರ ಕಾಂಗ್ರೆಸ್ ಕೈದಿಗಳ ಜೊತೆಗೆ ಅವರನ್ನು ಬಿಡುಗಡೆ ಮಾಡಲಾಯಿತು. [೪೫]
- ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (PM Jawahar Lal Nehru) ಅವರ ತಪ್ಪಿನಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು(POK). ನೆಹರು ಅವರ ಕೈಗೊಂಡು ಎರಡು ತಪ್ಪು ನಿರ್ಧಾರಗಳಿಂದ ಕಾಶ್ಮೀರವು (Jammu and Kashmir) ದಶಕಗಳಿಂದ ಬಳಲುವಂತಾಗಿದೆ. ಆದರೆ ಎಂದೆಂದಿಗೂ ನಮ್ಮದೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಬುಧವಾರ ಪ್ರತಿಪಾದಿಸಿದರು. 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು(ತಿದ್ದುಪಡಿ) ವಿಧೇಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ(ತಿದ್ದುಪಡಿ) ವಿಧೇಯಕಗಳನ್ನು ಮಂಡಿಸಿ, ಮಾತನಾಡಿದರು(Parliament Session).[೫೦]
- ($"ಡೊಮಿನಿಯನ್ ಸ್ಥಾನಮಾನ" - ಎಂದರೆ ಕೇಂದ್ರ ಸರ್ಕಾರಕ್ಕೆ ರಾಜ್ಯಗಳನ್ನು ಶತ್ರುಗಳಿಂದ ರಕ್ಷಣೆ ಮಾಡುವ ಅಧಿಕಾರ ಮತ್ತು ಗೌರ್ನರುಗಳನ್ನು/ ರಾಜ್ಯದ ಅಧ್ಯಕ್ಷರನ್ನು ನೇಮಿಸುವ ಆಧಿಕಾರ ಮಾತ್ರಾ ಇರುತ್ತದೆ ಉಳಿದ ಎಲ್ಲಾ ವಿಷಯದಲ್ಲಿ ರಾಜ್ಯಗಳು ಸ್ವತಂತ್ರವಾಗಿರುತ್ತವೆ; ರಾಜ್ಯಗಳ ಒಳಾಡತದಲ್ಲಿ ಕೇಂದ್ರಸ್ಕಾರ ಪ್ರವೇಶಿಸುವಂತಿಲ್ಲ. ಈಗ ಇಂಗ್ಲೆಡ್ ಮತ್ತು ಆಸ್ಟ್ರೇಲಿಯಾ ಇದ್ದಂತೆ. ಬ್ರಿಟಿಷ್ ಸರ್ಕಾರ ರಾಷ್ಟ್ರಾಧ್ಯಕ್ಷರನ್ನು ನೇಮಿಸುತ್ತದೆ. ಹಾಗೆ ಭಾರತದ ೫೬೦ ಸಂಸ್ಥಾನ-ರಾಜ್ಯಗಳು ಸ್ವತಂತ್ರವಾಗಿರುವ ಡೊಮಿನಿಯನ್ ಸರ್ಕಾರನೀಡುವ ಯೋಜನೆ ಬ್ರಿಟಿಷರದಾಗಿತ್ತು. ಇದಕ್ಕೆ ಅನೇಕ ಸದಸ್ಯರು ಬೆಂಬಲಿಸಿದರೂ, ಇದನ್ನು ನೆಹರು ವಿರೋಧಿಸಿ ಎಲ್ಲಾ ರಾಜ್ಯಗಳೂ ವಿಲೀನವಾದ ಬಲಿಷ್ಠ ಕೇಂದ್ರವುಳ್ಳ ಸ್ವತಂತ್ರಭಾರತ ರಚನೆಗೆ ಒತ್ತಾಯಿಸಿದರು.)
ಭಾರತದ ಮೇಲೆ ಜಪಾನಿನ ಆಕ್ರಮಣ
[ಬದಲಾಯಿಸಿ]- 1942 ರ ವಸಂತ ಋತುವಿನಲ್ಲಿ ಜಪಾನ್ ಬರ್ಮಾದ ಮೂಲಕ (ಈಗ ಮಯನ್ಮಾರ್) ಭಾರತದ ಮೇಲೆ ಆಕ್ರಮಣವನ್ನು ನಡೆಸಿದಾಗ, ಬ್ರಿಟಿಷ್ ಸರ್ಕಾರವು ಈ ಹೊಸ ಮಿಲಿಟರಿ ಬೆದರಿಕೆ ಎದುರಿಸಬೇಕಾಯಿತು, ಅದು ನೆಹರೂ ಮೊದಲಿಗೆ ಬಯಸಿದಂತೆ, ಭಾರತಕ್ಕೆ ಕೆಲವು ಪ್ರಸ್ತಾಪಗಳನ್ನು ಮಾಡಲು ನಿರ್ಧರಿಸಿದರು. ಪ್ರಧಾನ ಮಂತ್ರಿ ವಿನ್ಸ್ಟನ್ ಚರ್ಚಿಲ್ ಯುದ್ಧಸಮಯದ ಕ್ಯಾಬಿನೆಟ್’ನ ಸದಸ್ಯರಾದ ಸರ್ ಸ್ಟಾಫರ್ಡ್ ಕ್ರಿಪ್ಸ್ ರನ್ನು ಭಾರತಕ್ಕೆ ಕಳಿಸಿದರು. ಅವರು ನೆಹರುರನ್ನು ರಾಜಕೀಯವಾಗಿ ನಿಕಟವಾಗಿ ತಿಳಿದಿದ್ದನು ಮತ್ತು ಸಾಂವಿಧಾನಿಕ ಸಮಸ್ಯೆಯ ಪರಿಹಾರಕ್ಕಾಗಿ ಪ್ರಸ್ತಾಪಿಸಲು ಜಿನ್ನಾರನ್ನೂ ತಿಳಿದಿದ್ದನು. ಅವರು ಆಗಮಿಸಿದ ತಕ್ಷಣವೇ ಅವರು ಕಲ್ಪಿಸಿಕೊಂಡಿದ್ದಕ್ಕಿಂತಲೂ ಭಾರತ ಹೆಚ್ಚು ಆಳವಾಗಿ ವಿಭಜನೆಯಾಗಿದೆ ಎಂದು ಕಂಡುಹಿಡಿದನು. ನೆಹರೂ, ರಾಜಿಗಾಗಿ ಉತ್ಸುಕನಾಗಿದ್ದರು ಮತ್ತು ರಾಜಿಯಾಗಬಹುದೆಂದು ಭರವಸೆ ಹೊಂದಿದ್ದರು.,. ಗಾಂಧಿಯವರಿಗೆ ರಾಜಿಯ ಭರವಸೆಯಿರಲಿಲ್ಲ. ಜಿನ್ನಾ ಕಾಂಗ್ರೆಸ್ ವಿರುದ್ಧ ವಿರೋಧವನ್ನು ಮುಂದುವರಿಸಿದರು. "ಪಾಕಿಸ್ತಾನ ನಮ್ಮ ಏಕೈಕ ಬೇಡಿಕೆಯಾಗಿದೆ, ಮತ್ತು ಖಂಡಿತ ದೈವಸಾಕ್ಷಿಯಾಗಿ ಅದನ್ನು ನಾವು ಪಡೆಯುತ್ತೇವೆ" ಎಂದು ಜಿನ್ನಾ ಹೇಳಿದುದನ್ನು ಮುಸ್ಲಿಂ ಲೀಗ್ ಪತ್ರಿಕೆ "ಡಾನ್" ಘೋಷಿಸಿತು. (Jinnah had continued opposing the Congress. "Pakistan is our only demand, and by God we will have it.", declared the Muslim League newspaper "Dawn".[86]) [೫೧]
- ಪೂರ್ಣ ಸ್ವಾತಂತ್ರ್ಯಕ್ಕಿಂತಲೂ ಕಡಿಮೆಯದನ್ನು ಏನನ್ನೂ ಗಾಂಧಿಯವರು ಸ್ವೀಕರಿಸುವುದಿಲ್ಲ ಎಂದಾಗ ಕ್ರಿಪ್ಸ್ನ ಮಿಷನ್ ವಿಫಲವಾಯಿತು. ಕ್ರಿಪ್ಸ್‍ರೊಂದಿಗೆ ಸಹಕರಿಸಲು ಗಾಧೀಜಿಯವರ ನಿರಾಕರಣೆಯಿಂದ ನೆಹರೂ ಮತ್ತು ಗಾಂಧಿಯವರ ನಡುವಿನ ಹಳಸಿದ ಸಂಬಂಧವು ತಂಪುಗೊಂಡಿತು, ಆದರೆ ಇಬ್ಬರೂ ನಂತರ ರಾಜಿ ಮಾಡಿಕೊಂಡರು. 15 ಜನವರಿ 1941 ರಂದು, ಗಾಂಧಿಯವರು ಹೀಗೆ ಹೇಳಿದರು:
- ‘